ಜೋಹಾನಸ್ ಬರ್ಗ್: ‘ಬಾಲರಾಮನ ಪ್ರತಿಷ್ಠಾಪನೆಯು ಸರ್ವರಲ್ಲಿಯೂ ಶಾಂತಿ ಹಾಗೂ ಸೌಹಾರ್ದ ಮೂಡಿಸಲಿ’ ಎಂದು ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಕೇಶವ್ ಮಹಾರಾಜ್ ಆಶಿಸಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ಭಕ್ತಿ ಸಂಗೀತ ‘ರಾಮ್ ಸಿಯಾ ರಾಮ್...’ಗೆ ಹೆಜ್ಜೆ ಹಾಕಿ ಗಮನಸೆಳೆದಿದ್ದ ಅವರು, ಉತ್ತರ ಪ್ರದೇಶ ಮೂಲದವರು.

33 ವರ್ಷದ ಕೇಶವ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ’ಜೊಹಾನಸ್ಬರ್ಗ್ನಲ್ಲಿ ಇರುವ ಭಾರತದ ಕಾನ್ಸುಲ್ ಜನರಲ್ ಮಹೇಶ್ ಕುಮಾರ್ ಮತ್ತು ಭಾರತೀಯರಿಗೆ ನಾನು ಶುಭ ಕೋರುತ್ತೇನೆ‘ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಕ್ರಿಕೆಟ್ ಪಂದ್ಯಕ್ಕಾಗಿ ಕ್ರೀಡಾಂಗಣ ಪ್ರವೇಶಿಸುವಾಗ ‘ರಾಮ್ ಸಿಯಾ ರಾಮ್, ಜೈ ಜೈ ರಾಮ್...’ ಹಾಡನ್ನು ಡಿ.ಜೆ. ಕೇಳಿಸಿದ್ದರು. ಈ ಸಂಗೀತ ತಮಗೆ ಉತ್ತೇಜನ ನೀಡಿತು ಎಂದೂ ಅವರು ಹೇಳಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.