ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ ವಿರುದ್ಧ ಅಮೋಘ ಆಟ: ಐಸಿಸಿ ತಿಂಗಳ ಆಟಗಾರನಾಗಿ ಮಯಂಕ್ ನಾಮನಿರ್ದೇಶನ

Last Updated 8 ಜನವರಿ 2022, 13:21 IST
ಅಕ್ಷರ ಗಾತ್ರ

ದುಬೈ: ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಎದುರಿನ ಸರಣಿಯಲ್ಲಿ ಅಮೋಘ ಸಾಮರ್ಥ್ಯ ತೋರಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್‌ ಮಯಂಕ್ ಅಗರವಾಲ್ ಅವರನ್ನು ಐಸಿಸಿ ತಿಂಗಳ ಆಟಗಾರನಾಗಿ ನಾಮನಿರ್ದೇಶನ ಮಾಡಲಾಗಿದೆ.

ನ್ಯೂಜಿಲೆಂಡ್ ಸ್ಪಿನ್ನರ್ ಎಜಾಜ್ ಪಟೇಲ್‌ ಮತ್ತು ಆಸ್ಟ್ರೇಲಿಯಾದ ವೇಗಿ ಮಿಚೆಲ್‌ ಸ್ಟಾರ್ಕ್‌ ಕೂಡ ಈ ಪಟ್ಟಿಯಲ್ಲಿದ್ದಾರೆ.

ರೋಹಿತ್ ಶರ್ಮಾ, ಶುಭಮನ್ ಗಿಲ್ ಅವರ ಅನುಪಸ್ಥಿತಿಯ ಸಂಪೂರ್ಣ ಲಾಭ ಪಡೆದುಕೊಂಡ ಮಯಂಕ್ ಮಿಂಚು ಹರಿಸಿದ್ದರು. ಎರಡು ಪಂದ್ಯಗಳಲ್ಲಿ 69ರ ಸರಾಸರಿಯಲ್ಲಿ 276 ರನ್‌ ಕಲೆಹಾಕಿದ್ದರು. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿದ್ದವು.

ಭಾರತ ಮೂಲದ ಎಡಗೈ ಸ್ಪಿನ್ನರ್‌ ಎಜಾಜ್‌ ಪಟೇಲ್‌ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಇತಿಹಾಸ ಬರೆದಿದ್ದರು. ಭಾರತದ ಎದುರಿನ ಪಂದ್ಯದ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್‌ಗಳನ್ನು ಕಬಳಿಸಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡಿದ್ದರು. ಇದಕ್ಕೂ ಮೊದಲು ಭಾರತದ ಅನಿಲ್ ಕುಂಬ್ಳೆ ಮತ್ತು ಇಂಗ್ಲೆಂಡ್‌ನ ಜಿಮ್‌ ಲೇಕರ್‌ ಈ ದಾಖಲೆ ಮಾಡಿದ್ದರು.

ಆ್ಯಷಸ್‌ ಟ್ರೋಫಿಯನ್ನು ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆ ಆಸ್ಟ್ರೇಲಿಯಾ ಗೆದ್ದುಕೊಳ್ಳುವಲ್ಲಿ ಮಿಚೆಲ್‌ ಸ್ಟಾರ್ಕ್ ಪ್ರಮುಖ ಪಾತ್ರ ವಹಿಸಿದ್ದಾರೆ. ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡರಲ್ಲೂ ಭರ್ಜರಿ ಸಾಮರ್ಥ್ಯ ತೋರಿದ್ದಾರೆ. ಮೂರು ಪಂದ್ಯಗಳಿಂದ 14 ವಿಕೆಟ್‌ ಗಳಿಸಿರುವ ಅವರು, 117 ರನ್‌ಗಳನ್ನು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT