ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಾರ್ಪಣೆ ಪಂದ್ಯದಲ್ಲಿ ಮಯಂಕ್‍ಗೆ ಅರ್ಧಶತಕ

Last Updated 26 ಡಿಸೆಂಬರ್ 2018, 4:48 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 2 ವಿಕೆಟ್ ಕಳೆದುಕೊಂಡು 131ರನ್ ದಾಖಲಿಸಿದೆ

ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಕನ್ನಡಿಗ ಮಯಂಕ್ ಅಗರವಾಲ್ 76 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಆರಂಭಿಕ ದಾಂಡಿಗರಾಗಿ ಹನುಮ ವಿಹಾರಿ ಮತ್ತು ಮಯಂಕ್ ಕ್ರೀಸ್‍ಗಿಳಿದಿದ್ದರು.66 ಎಸೆತಗಳನ್ನು ಎದುರಿಸಿದ ವಿಹಾರಿ 8 ರನ್ ದಾಖಲಿಸಿ ಪ್ಯಾಟ್‌ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು, ಮಯಂಕ್ ಅಗರವಾಲ್‍ಗೆ ಉತ್ತಮ ಫಾರ್ಮ್ ನಲ್ಲಿದ್ದು ಈತನಿಗೆ ಸಾಥ್ ನೀಡಿದ್ದು ಚೇತೇಶ್ವರ ಪೂಜಾರ.
161 ಎಸೆತಗಳಲ್ಲಿ ಮಯಂಕ್ 76 ರನ್ ದಾಖಲಿಸಿ 55ನೇ ಓವರ್‌ನಲ್ಲಿ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಚಹಾ ವಿರಾಮದ ನಂತರ ಪಂದ್ಯ ಆರಂಭವಾದಾಗ ಚೇತೇಶ್ವರ ಪೂಜಾರ 37ರನ್ ಮತ್ತು ವಿರಾಟ್ ಕೊಹ್ಲಿ 4ರನ್ ಗಳಿಸಿ ಕ್ರೀಸ್‍ನಲ್ಲಿದ್ದಾರೆ.

ಬಾಕ್ಸಿಂಗ್ ಡೇ ಅಂದರೇನು?
ಬಾಕ್ಸಿಂಗ್ ಡೇ ಪರಿಕಲ್ಪನೆ ಆರಂಭಗೊಂಡದ್ದು ಇಂಗ್ಲೆಂಡ್‌ನಲ್ಲಿ. ಕ್ರಿಸ್‌ಮಸ್‌ನ ಮರುದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯುತ್ತಾರೆ. ಐರ್ಲೆಂಡ್‌ ಮತ್ತು ಸ್ಪೇನ್‌ನಲ್ಲಿ ಈ ದಿನವನ್ನು ಸೇಂಟ್ ಸ್ಟೀಫನ್ಸ್‌ ದಿನ ಎಂದೂ ಕರೆಯುತ್ತಾರೆ. ರೊಮೇನಿಯಾ, ಹಂಗರಿ, ಜರ್ಮನಿ, ಪೋಲೆಂಡ್‌ ಮತ್ತು ನೆದರ್ಲೆಂಡ್ಸ್‌ನಲ್ಲಿ ಈ ದಿನವನ್ನು ಎರಡನೇ ಕ್ರಿಸ್‌ಮಸ್ ದಿನ ಎನ್ನಲಾಗುತ್ತದೆ.

ಯುರೋಪ್‌ ರಾಷ್ಟ್ರಗಳಲ್ಲಿ ವರ್ಷದ ಕೊನೆಯ ವಾರ ಚರ್ಚ್‌ಗಳಲ್ಲಿ ಪೊಟ್ಟಣಗಳನ್ನು (ಬಾಕ್ಸ್‌) ಇರಿಸಿ ಹಣ ಮತ್ತು ವಸ್ತು ರೂಪದಲ್ಲಿ ಕಾಣಿಕೆಗಳನ್ನು ಸ್ವೀಕರಿಸಲಾಗುತ್ತದೆ. ಈ ‘ಬಾಕ್ಸ್‌’ಗಳಿಂದಲೇ ಬಾಕ್ಸಿಂಗ್ ಡೇ ಎಂಬ ಹೆಸರು ಬಂದಿರಬೇಕು ಎನ್ನಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಪ್ರತಿ ವರ್ಷ ಈ ದಿನ ಆರಂಭವಾಗುವಂತೆ ಟೆಸ್ಟ್ ಪಂದ್ಯವನ್ನು ನಿಗದಿ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT