ಭಾನುವಾರ, ಆಗಸ್ಟ್ 9, 2020
25 °C

ವಾಂಖೆಡೆ ಕ್ರೀಡಾಂಗಣದ ಮೂರು ಬ್ಲಾಕ್‌ಗಳಿಗೆ ವೆಂಗ್‌ಸರ್ಕಾರ್‌ ಹೆಸರಿಡಲು ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ವಾಂಖೆಡೆ ಕ್ರೀಡಾಂಗಣದ ಮೂರು ಬ್ಲಾಕ್‌ಗಳಿಗೆ ಭಾರತದ ಖ್ಯಾತ ಕ್ರಿಕೆಟಿಗ ದಿಲೀಪ್‌ ವೆಂಗ್‌ಸರ್ಕಾರ್‌ ಅವರ ಹೆಸರಿಡುವಂತೆ ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಪೆಕ್ಸ್‌ ಕೌನ್ಸಿಲ್ ಸದಸ್ಯ ನದೀಮ್‌ ಮೆಮನ್‌ ಒತ್ತಾಯಿಸಿದ್ದಾರೆ.

‘ಮುಂಬೈನ ಕ್ರಿಕೆಟಿಗನಾಗಿರುವ ವೆಂಗ್‌ಸರ್ಕಾರ್‌‌ ಅವರು 116 ಟೆಸ್ಟ್‌ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ತಂಡದ ನಾಯಕತ್ವವನ್ನೂ ವಹಿಸಿದ್ದರು. ವಾಂಖೆಡೆ ಕ್ರೀಡಾಂಗಣದ ಉತ್ತರ ಸ್ಟ್ಯಾಂಡ್‌ನ ಎ,ಬಿ,ಸಿ ಬ್ಲಾಕ್‌ಗಳಿಗೆ ಅವರ ಹೆಸರಿಡುವಂತೆ ಪ್ರಸ್ತಾಪ ಸಲ್ಲಿಸಿದ್ದೇನೆ‘ ಎಂದು ನದೀಮ್‌ ಅವರು ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ವಿಜಯ್‌ ಪಾಟೀಲ್‌ ಹಾಗೂ ಅಪೆಕ್ಸ್‌ ಕೌನ್ಸಿಲ್‌ನ ಎಲ್ಲ ಸದಸ್ಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

’ಕ್ರೀಡಾಂಗಣದ ಬ್ಲಾಕ್‌ಗಳಿಗೆ ವೆಂಗ್‌ಸರ್ಕಾರ್ ಹೆಸರಿಟ್ಟರೆ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ‘ ಎಂದು ಕ್ಯೂರೇಟರ್‌ ಕೂಡ ಆಗಿರುವ ಮೆಮನ್‌ ಹೇಳಿದ್ದಾರೆ.

ವಾಂಖೆಡೆ ಕ್ರೀಡಾಂಗಣದ ಎರಡು ಸ್ಟ್ಯಾಂಡ್‌ಗಳಿಗೆ ಈಗಾಗಲೇ ಬ್ಯಾಟಿಂಗ್‌ ದಿಗ್ಗಜರಾದ ಸುನಿಲ್‌ ಗಾವಸ್ಕರ್‌ ಹಾಗೂ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿಡಲಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಇವರು ಮುಂಬೈ ತಂಡವನ್ನು ಪ್ರತಿನಿಧಿಸಿದ್ದಾರೆ.

ಮುಂದಿನ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಬೇಕೆಂದು ಮೆಮನ್‌ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು