ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರನೇ ಟೆಸ್ಟ್: ಬೆಸ್ಟೊ ಬೆಂಬಲಕ್ಕೆ ನಿಂತ ಮೆಕ್ಕಲಂ

ನೂರನೇ ಟೆಸ್ಟ್ ಧರ್ಮಶಾಲಾದಲ್ಲಿ ಆಡಲಿರುವ ಇಂಗ್ಲೆಂಡ್‌ ಆಟಗಾರ
Published 27 ಫೆಬ್ರುವರಿ 2024, 14:33 IST
Last Updated 27 ಫೆಬ್ರುವರಿ 2024, 14:33 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಂಚಿಯಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ನಿರಾಶಾದಾಯಕ ನಿರ್ವಹಣೆಯಿಂದ ಓಲಿ ರಾಬಿನ್ಸನ್ ಅವರ ಭವಿಷ್ಯ ಡೋಲಾಯಮನವಾಗಿದೆ. ಆದರೆ ತಮ್ಮ ನೂರನೇ ಟೆಸ್ಟ್‌ ಪಂದ್ಯವನ್ನು ಧರ್ಮಶಾಲಾದಲ್ಲಿ ಆಡಲಿರುವ ಜಾನಿ ಬೆಸ್ಟೊ ಅವರಿಗೆ ಮುಖ್ಯ ಕೋಚ್‌ ಬ್ರೆಂಡನ್ ಮೆಕ್ಕಲಂ ಬೆಂಬಲವಾಗಿ ನಿಂತಿದ್ದಾರೆ.

ಬೇಸ್ಟೊ ಕೊನೆಯ ಟೆಸ್ಟ್‌ನಲ್ಲಿ ಉತ್ತಮ ಇನಿಂಗ್ಸ್ ಆಡಬಹುದೆಂಬ ನಿರೀಕ್ಷೆ ಅವರದು. ಈ ಸರಣಿಯಲ್ಲಿ ಬೆಸ್ಟೊ ಮಾತ್ರ ಹೇಳಿಕೊಳ್ಳುವಂಥ ಒಂದೂ ಇನಿಂಗ್ಸ್ ಆಡಿಲ್ಲ. ಇದುವರೆಗಿನ ಎಂಟು ಇನಿಂಗ್ಸ್‌ಗಳಲ್ಲಿ ಅವರ ಗರಿಷ್ಠ 38. ಅದೂ ರಾಂಚಿಯ ಮೊದಲ ಇನಿಂಗ್ಸ್‌ನಲ್ಲಿ.

‘ಈ ಟೆಸ್ಟ್‌ ಅವರಿಗೆ ಭಾವನಾತ್ಮಕ ಎನ್ನುವುದರಲ್ಲಿ ಸಂದೇಹವಿಲ್ಲ. ಎಲ್ಲರಿಗೂ ಅವರ ಕಥೆ ಗೊತ್ತಿದೆ. ಅವರೊಬ್ಬ ಭಾವಜೀವಿ. ಮೈಲಿಗಲ್ಲಿನಂಥ ಆ ಸಂದರ್ಭ ಅವರಿಗೆ ಬಹಳ ಮಹತ್ವದ್ದಾಗಲಿದೆ’ ಎಂದು ಬೆಸ್ಟೊ ಅವರ ಮೈಲಿಗಲ್ಲು ಪಂದ್ಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದರು. ಅವರು ಇಂಗ್ಲೆಂಡ್‌ನ ಮಾಧ್ಯಮದವರ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದರು.

ರಾಬಿನ್ಸನ್‌ ವಿಫಲರಾಗಿರುವುದು ಅವರಿಗಷ್ಟೇ ಎಲ್ಲ, ತಂಡದ ಎಲ್ಲರಿಗೂ ನಿರಾಶೆ ಮೂಡಿಸಿದೆ ಎಂದರು. ಅವರು ಬೌಲ್‌ ಮಾಡಿದ 12 ಓವರುಗಳಲ್ಲಿ ವಿಕೆಟ್ ಪಡೆದಿರಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ ಅವರಿಗೆ ಬೌಲಿಂಗ್ ನೀಡಿರಲಿಲ್ಲ.

ಬಾಝ್‌ಬಾಲ್‌ ಯುಗ ಆರಂಭವಾದ ಮೇಲೆ ಇಂಗ್ಲೆಂಡ್‌ ತಂಡ, ಮೊದಲ ಬಾರಿ ಭಾರತ ಕೈಲಿ ಸರಣಿ ಸೋತಿದೆ. ಐದು ಪಂದ್ಯಗಳ ಸರಣಿ ಈಗ 3–1ರಲ್ಲಿ ಭಾರತದ ವಶವಾಗಿದೆ.

ಎತ್ತರದ ಸ್ಪಿನ್ನರ್‌ಗಳಾದ ಟಾಮ್‌ ಹಾರ್ಟ್ಲಿ ಮತ್ತು ಶೋಯೆಬ್ ಬಷೀರ್ ಅವರ ಬಗ್ಗೆ ಕೋಚ್‌ ಮೆಚ್ಚುಗೆಯ ನುಡಿಗಳನ್ನಾಡಿದರು. ಇವರಿಬ್ಬರು ನಾಲ್ಕು ಟೆಸ್ಟ್‌ಗಳಲ್ಲಿ 32 ವಿಕೆಟ್‌ ಬಾಚಿಕೊಂಡಿದ್ದಾರೆ. ಹಾರ್ಟ್ಲಿ ಸರಣಿಯಲ್ಲಿ ಅತ್ಯಧಿಕ ವಿಕೆಟ್‌ (20) ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT