ಮಂಗಳವಾರ, ಮಾರ್ಚ್ 2, 2021
29 °C
ವೆಸ್ಟ್ ಇಂಡೀಸ್‌ ತಂಡವನ್ನು ಫಾಲೊ ಆನ್‌ಗೆ ಗುರಿ ಮಾಡಿದ ಆತಿಥೇಯರು; ಮೆಹದಿ ಮಿಂಚು

ವೆಸ್ಟ್ ಇಂಡೀಸ್‌ ವಿರುದ್ಧ ಬಾಂಗ್ಲಾಗೆ ಇನಿಂಗ್ಸ್ ಜಯದ ಸಂಭ್ರಮ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Deccan Herald

ಢಾಕಾ: ಪ್ರವಾಸಿ ವೆಸ್ಟ್ ಇಂಡೀಸ್‌ ತಂಡವನ್ನು ಸ್ಪಿನ್‌ ಬಲೆಯಲ್ಲಿ ಕೆಡವಿದ ಮೆಹದಿ ಹಸನ್‌ ಆತಿಥೇಯ ಬಾಂಹ್ಲಾದೇಶ ತಂಡಕ್ಕೆ ಭರ್ಜರಿ ಜಯದ ಕಾಣಿಕೆ ನೀಡಿದರು. ಭಾನುವಾರ ಮುಕ್ತಾಯಗೊಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಇನಿಂಗ್ಸ್ ಮತ್ತು 184 ರನ್‌ಗಳಿಂದ ಗೆದ್ದಿತು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2–0ಯಿಂದ ತನ್ನದಾಗಿಸಿಕೊಂಡಿತು.

ಮೊದಲ ಇನಿಂಗ್ಸ್‌ನಲ್ಲಿ 58ಕ್ಕೆ ಏಳು ವಿಕೆಟ್ ಕಬಳಿಸಿದ ಹಸನ್‌ ಎರಡನೇ ಇನಿಂಗ್ಸ್‌ನಲ್ಲಿ 59ಕ್ಕೆ ಐದು ವಿಕೆಟ್ ಉರುಳಿಸಿದರು. ಇದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ. ಅವರ ‍ಪರಿಣಾಮಕಾರಿ ಆಫ್‌ಸ್ಪಿನ್‌ಗೆ ನಲುಗಿದ ವೆಸ್ಟ್ ಇಂಡೀಸ್ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 111 ಮತ್ತು 213 ರನ್‌ಗಳಿಗೆ ಆಲೌಟಾಯಿತು. ಪಂದ್ಯ ಮೂರನೇ ದಿನಕ್ಕೇ ಮುಕ್ತಾಯಗೊಂಡಿತು.

ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ 508 ರನ್‌ ಗಳಿಸಿತ್ತು. ವೆಸ್ಟ್ ಇಂಡೀಸ್‌ ಬೇಗನೇ ಆಲೌಟಾಗಿ ಫಾಲೊ ಆನ್‌ಗೆ ಒಳಗಾಯಿತು. ಈ ಮೂಲಕ ಬಾಂಗ್ಲಾ ನೆಲದಲ್ಲಿ ಫಾಲೊ ಆನ್‌ ಆದ ಮೊದಲ ತಂಡ ಎಂದೆನಿಸಿಕೊಂಡಿತು.

ಎರಡನೇ ಇನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದರೆ ಶಿಮ್ರಾನ್ ಹೆಟ್ಮೆಯರ್ ಒಬ್ಬರೇ ಕ್ರೀಸ್‌ನಲ್ಲಿ ತಳವೂರಿದರು. 92 ಎಸೆತಗಳಲ್ಲಿ 93 ರನ್‌ ಗಳಿಸಿ ಅವರು ಗಮನ ಸೆಳೆದರು. ಅವರ ಇನಿಂಗ್ಸ್‌ನಲ್ಲಿ ಒಂಬತ್ತು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳು ಒಳಗೊಂಡಿದ್ದವು. ಅವರಿಗೆ ಚೊಚ್ಚಲ ಶತಕ ಗಳಿಸಲು ಮೆಹದಿ ಹಸನ್ ಅವಕಾಶ ನೀಡಲಿಲ್ಲ.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ, ಮೊದಲ ಇನಿಂಗ್ಸ್‌: 508; ವೆಸ್ಟ್ ಇಂಡೀಸ್‌: ಮೊದಲ ಇನಿಂಗ್ಸ್‌: 111; ಎರಡನೇ ಇನಿಂಗ್ಸ್‌ (ಫಾಲೊ ಆನ್‌): 59.2 ಓವರ್‌ಗಳಲ್ಲಿ 213 (ಶಾಯಿ ಹೋಪ್‌ 25, ಶಿಮ್ರಾನ್ ಹೆಟ್ಮೆಯರ್ 93, ಲ್ಯೂವಿಸ್‌ 20; ಶಕೀಬ್‌ ಅಲ್ ಹಸನ್‌ 65ಕ್ಕೆ1, ಮಹದಿ ಹಸನ್‌ 59ಕ್ಕೆ5, ತೈಜುಲ್‌ 40ಕ್ಕೆ3, ನಯೀಮ್‌ 34ಕ್ಕೆ1). ಫಲಿತಾಂಶ: ಬಾಂಗ್ಲಾದೇಶಕ್ಕೆ ಇನಿಂಗ್ಸ್ ಮತ್ತು 184 ರನ್‌ಗಳ ಜಯ; ಎರಡು ಪಂದ್ಯಗಳ ಸರಣಿಯಲ್ಲಿ 0–2 ಜಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು