ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಕೌಟುಂಬಿಕ ವ್ಯವಸ್ಥೆಯೇ ಶ್ರೇಷ್ಠ: ಇರ್ಫಾನ್ ಪಠಾಣ್

ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳುವ ಕುರಿತು ಕ್ರಿಕೆಟಿಗರ ಅಭಿಮತ
Last Updated 28 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಮಾನಸಿಕವಾಗಿ ಸದೃಢತೆ ಕಾಪಾಡಿಕೊಳ್ಳಲು ಭಾರತದ ಕೌಟುಂಬಿಕ ವ್ಯವಸ್ಥೆಯು ಶ್ರೇಷ್ಠವಾಗಿದೆ ಎಂದು ದಿಗ್ಗಜ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯಲು ಹಾಕಲಾಗಿರುವ ಲಾಕ್‌ಡೌನ್‌ನಿಂದ ‘ಗೃಹಬಂಧನ’ದಲ್ಲಿರುವ ಆಟಗಾರರು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಆಟದಿಂದ ದೂರವಿದ್ದು ಮನೋದೈಹಿಕ ಆರೋಗ್ಯವನ್ನು ಸ್ಥಿರವಾಗಿಟ್ಟುಕೊಳ್ಳುವ ಸವಾಲು ಕೂಡ ಅವರ ಮುಂದಿದೆ.

‘ಅನಿರೀಕ್ಷಿತವಾದ ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಬಹಳ ದೃಢವಾದ ಆತ್ಮವಿಶ್ವಾಸ ಬೇಕಾಗುತ್ತದೆ. ನಮ್ಮ ದೇಶದಲ್ಲಿರುವ ಕೌಟುಂಬಿಕ ಸಂಸ್ಕೃತಿ ಮತ್ತು ಮೌಲ್ಯಗಳು ನಮ್ಮ ಆತ್ಮಬಲ ಹೆಚ್ಚಿಸುತ್ತವೆ. ಒತ್ತಡವನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ನಾವು ನಿರಾಳವಾಗಿರಬಹುದು’ ಹಿರಿಯ ಕ್ರಿಕೆಟಿಗ ಮಣಿಂದರ್ ಸಿಂಗ್, ಮನೋಜ್ ತಿವಾರಿ ಮತ್ತು ಇರ್ಫಾನ್ ಪಠಾಣ್ ಹೇಳುತ್ತಾರೆ.

‘ವಿದೇಶಗಳ ಸಂಸ್ಕೃತಿಗೆ ಹೋಲಿಸಿದರೆ ನಮ್ಮಲ್ಲಿ ಬಹಳಷ್ಟು ವೈವಿಧ್ಯತೆಗಳಿವೆ. ಕುಟುಂಬದ ಸದಸ್ಯರ ಆಪ್ತತೆಯು ಎಂತಹ ನೋವನ್ನು ಶಮನಗೊಳಿಸುತ್ತವೆ. ನಕಾರಾತ್ಮಕ ಯೋಚನೆಗಳು ಬರದಂತೆ ತಡೆಯುತ್ತವೆ’ ಎಂದು ಮನೋಜ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

‘ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ನಿರುದ್ಯೋಗಿಗಳಾಗಿದ್ದರೆ, ನೌಕರಿ ಸಿಗುವವರೆಗೂ ಸರ್ಕಾರವೇ ಅವರಿಗೆ ಹಣ ಕೊಡುತ್ತದೆ. ಆದರೆ, ಭಾರತದಲ್ಲಿ ಅಂತಹ ಸಮಸ್ಯೆ ಇಲ್ಲ. ನಮ್ಮಲಿರುವ ಬಲಿಷ್ಠವಾದ ಕೌಟುಂಬಿಕ ವ್ಯವಸ್ಥೆಯು ಸದಾ ನಮ್ಮ ಬೆನ್ನಿಗೆ ಇರುತ್ತದೆ. ನನ್ನಕುಟುಂಬದಲ್ಲಿ ನನ್ನಣ್ಣ, ಅಪ್ಪ, ಅಮ್ಮ ಮತ್ತು ಉಳಿದ ಸದಸ್ಯರು ಯಾವಾಗಲೂ ನನ್ನ ಉನ್ನತಿಗಾಗಿ ಬೆಂಬಲವಾಗಿ ನಿಂತಿದ್ದಾರೆ’ ಎಂದು ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT