ಬೆಂಗಳೂರು: ರಾಜಕೀಯ,ಸಿನಿಮಾರಂಗದ ಕೆಲವರ ಎದೆ ನಡುಗಿಸುತ್ತಿರುವ #MeToo ಅಭಿಯಾನದ ಅಬ್ಬರ ಇದೀಗ ಕ್ರಿಕೆಟ್ ಅಂಗಳಕ್ಕೂ ಹಬ್ಬಿದೆ.ಕೇಂದ್ರ ಸಚಿವ ಎಂ.ಜೆ. ಅಕ್ಬರ್, ಅಲೋಕ್ ನಾಥ್,ನಾನಾ ಪಾಟೇಕರ್, ಸಾಜಿದ್ ಖಾನ್, ಕೈಲಾಸ್ ಖೇರ್, ಅದಿತಿ ಮಿತ್ತಲ್ ನಂತರ ಇದೀಗ ಬಿಸಿಸಿಐ ಸಿಇಒರಾಹುಲ್ ಜೋಹ್ರಿ ಸರದಿ.

2016ರಿಂದ ಬಿಸಿಸಿಐನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ವಿರುದ್ಧ ಲೇಖಕಿ ಹರ್ನಿದ್ಕೌರ್ ಟ್ವಿಟರ್ನಲ್ಲಿ ಕಿರುಕುಳದ ಆರೋಪ ಮಾಡಿದ್ದಾರೆ. ಜೋಹ್ರಿ ಅವರು ಮಾಡಿದ್ದಾರೆ ಎನ್ನಲಾದ ಇಮೇಲ್ಗಳ ಸ್ಕ್ರೀನ್ ಶಾಟ್ಗಳನ್ನು ಹರಿಬಿಟ್ಟಿರುವ ಕೌರ್, ಇದೀಗ ನಿಮ್ಮ ಸರದಿ ಎಂದು ಕುಟುಕಿದ್ದಾರೆ.

@ಪೆಡೆಸ್ಟ್ರಿಯನ್ಪೊಯೆಟ್ ಎಂಬ ಖಾತೆಯ ಮೂಲಕ ಕೆಲವು ಸ್ಕ್ರೀನ್ ಶಾಟ್ಗಳನ್ನು ಪ್ರಕಟಿಸಿರುವ ಕೌರ್,‘ಮಾಧ್ಯಮಗಳಿಗೆ ಕೆಲವು ಇಮೇಲ್ಗಳನ್ನು ಕಳುಹಿಸಲಾಗಿದೆ. ಸಂತ್ರಸ್ತರು ಎಲ್ಲರ ಹೆಸರುಗಳನ್ನು ಬಹಿರಂಗಪಡಿಸದಂತೆ ಹೇಳಿದ್ದಾರೆ. ರಾಹುಲ್ ಜೋಹ್ರಿ ಇದೀಗ ನಿಮ್ಮ ಸಮಯ’ ಎಂದು ಬರೆದಿದ್ದಾರೆ.

ಲಭ್ಯವಿರುವ ಸ್ಕ್ರೀನ್ಶಾಟ್ಗಳ ಪ್ರಕಾರ, ಜೋಹ್ರಿ ಅವರು ಸಂತ್ರಸ್ತರಿಗೆ ಉದ್ಯೋಗ ಕೊಡಿಸುವ ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.