ಬಾಂಗಿ: ಸಿಂಗಪುರ ವಿರುದ್ಧ ನಡೆದ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಮಂಗೋಲಿಯಾ ಕೇವಲ 10 ರನ್ನಿಗೆ ಆಲೌಟ್ ಆಗಿದೆ.
ಮಲೇಷ್ಯಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಏಷ್ಯಾ ಅರ್ಹತಾ ಸುತ್ತಿನ 'ಎ' ಗುಂಪಿನ ಪಂದ್ಯದಲ್ಲಿ ಈ ಫಲಿತಾಂಶ ದಾಖಲಾಯಿತು.
ಈ ಗುರಿ ಬೆನ್ನಟ್ಟಿದ ಸಿಂಗಪುರ ಒಂದು ವಿಕೆಟ್ ನಷ್ಟಕ್ಕೆ ಕೇವಲ ಐದು ಎಸೆತಗಳಲ್ಲಿ ಗೆಲುವು ದಾಖಲಿಸಿತು.
ಇದು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡವೊಂದರಿಂದ ದಾಖಲಾದ ಕನಿಷ್ಠ ಮೊತ್ತವಾಗಿದೆ. ಕಳೆದ ವರ್ಷ ಸ್ಪೇನ್ ವಿರುದ್ಧ ಐಲ್ ಆಫ್ ಮ್ಯಾನ್ ತಂಡ ಕೂಡ ಕೇವಲ 10 ರನ್ನಿಗೆ ಆಲೌಟ್ ಆಗಿತ್ತು.
ಸಿಂಗಪುರದ ಪರ ಹರ್ಷ ಭಾರಧ್ವಾಜ್ ನಾಲ್ಕು ಓವರ್‌ಗಳಲ್ಲಿ ಕೇವಲ ಮೂರು ರನ್ನಿಗೆ ಆರು ವಿಕೆಟ್ ಕಬಳಿಸಿದರು.
ಮಂಗೋಲಿಯಾದ ಬ್ಯಾಟಿಂಗ್ ಕಾರ್ಡ್ ಇಂತಿತ್ತು:
0, 1, 0, 1, 2, 0, 0, 1, 2, 0, 1
ಎರಡು ರನ್ ಇತರೆ ರನ್ ರೂಪದಲ್ಲಿ ಬಂದಿತ್ತು.