ಇಂಡಿಯಾ ಸಿಮೆಂಟ್ಸ್‌ ಸಭೆಯಲ್ಲಿ ಧೋನಿ

7

ಇಂಡಿಯಾ ಸಿಮೆಂಟ್ಸ್‌ ಸಭೆಯಲ್ಲಿ ಧೋನಿ

Published:
Updated:
Deccan Herald

ಚೆನ್ನೈ: ಭಾರತ ಕ್ರಿಕೆಟ್ ತಂಡದ ಆಟಗಾರ ಮಹೇಂದ್ರಸಿಂಗ್ ಧೋನಿ ಶುಕ್ರವಾರ ಇಲ್ಲಿ ನಡೆದ ಇಂಡಿಯಾ ಸಿಮೆಂಟ್ಸ್‌ ಸಂಸ್ಥೆಯ ಬೋರ್ಡ್‌ ಸಭೆಯಲ್ಲಿ ಭಾಗವಹಿಸಿದರು.

ಈ ಕಂಪೆನಿಗೆ ಬಿಸಿಸಿಐನ ಪದಚ್ಯುತ ಅಧ್ಯಕ್ಷ ಎನ್. ಶ್ರೀನಿವಾಸನ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಧೋನಿ ಅವರು ಇಲ್ಲಿ ಉಪಾಧ್ಯಕ್ಷ ಹುದ್ದೆ ಹೊಂದಿದ್ದಾರೆ.

ಸಭೆಯಲ್ಲಿ ಕಂಪೆನಿಯ ಲೆಕ್ಕಪತ್ರ ವ್ಯವಹಾರಗಳು ಮತ್ತು ಭವಿಷ್ಯದ ಯೋಜನೆಗಳ ಕುರಿತು ನಿರ್ದೇಶಕರೊಂದಿಗೆ ಧೋನಿ ಚರ್ಚಿಸಿದರು ಎಂದು ಇಂಟರ್‌ನ್ಯಾಷನಲ್ ಬಿಸಿನೆಸ್ ಟೈಮ್ಸ್‌ ವೆಬ್‌ಸೈಟ್ ವರದಿ ಮಾಡಿದೆ.

ಈಚೆಗೆ ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯಲ್ಲಿ ಧೋನಿ ಆಡಿ ದ್ದರು. ಆದರೆ ಟ್ವೆಂಟಿ–20 ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿರಲಿಲ್ಲ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !