ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19.29ಕ್ಕೇ ಧೋನಿ ನಿವೃತ್ತಿಯಾಗಿದ್ದೇಕೆ? ಸಮಯದ ಪ್ರಶ್ನೆಗೆ ಇಲ್ಲಿವೆ ಕೆಲ ಉತ್ತರಗಳು

Last Updated 16 ಆಗಸ್ಟ್ 2020, 12:51 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಸುಮಾರು ಒಂದು ವರ್ಷದಿಂದ ಅವರ ನಿವೃತ್ತಿಯ ಕುರಿತು ನಡೆಯುತ್ತಿದ್ದ ಚರ್ಚೆಗಳಿಗೆ ಶನಿವಾರ ತೆರೆಬಿದ್ದಿದೆ.

‘ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಇಂದು ಸಂಜೆ 7.29 (19.29) ರಿಂದ ನನ್ನನ್ನು ನಿವೃತ್ತನೆಂದು ಪರಿಗಣಿಸಿ’ ಎಂದು 39 ವರ್ಷದ ವಿಕೆಟ್ ‌ಕೀಪರ್– ಬ್ಯಾಟ್ಸ್‌ಮನ್ ಧೋನಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

74ನೇ ಸ್ವಾತಂತ್ರ್ಯೋತ್ಸವದ ದಿನ ಘೋಷಿಸಿದ ತಮ್ಮ ನಿವೃತ್ತಿಗೆ ಅವರು ಉಲ್ಲೇಖಿಸಿದ ಸಮಯದ (19.29) ಕುರಿತು ಎಲ್ಲರಿಗೂ ಜಿಜ್ಞಾಸೆ ಮೂಡಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮದೇ ಅಭಿಪ್ರಾಯಗಳನ್ನು, ವಾದಗಳನ್ನು ಮುಂದಿಟ್ಟಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಗಮನಸೆಳೆದ ಕೆಲ ಉತ್ತರಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

19.29 ಮಹತ್ವದ ಸಮಯವಾಗಿದೆ. ಅದೇ ಸಮಯದಲ್ಲೇ ಭಾರತವು ನ್ಯೂಜಿಲೆಂಡ್ ವಿರುದ್ಧದ 2019 ರ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಸೋತಿತ್ತು. ಇದು ಧೋನಿಯ ಕೊನೆಯ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವೂ ಆಗಿದೆ ಎಂದು ಒಬ್ಬರು ಹೇಳಿದ್ದಾರೆ.

ಧೋನಿ ನಿರ್ಧಾರದ ಹಿಂದೆ ಸಂಖ್ಯಾಶಾಸ್ತ್ರದ ಕಾರಣವಿದೆ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಹೇಳಿದ್ದಾರೆ. 1929 ಎಂಬುದು ದೇವದೂತನೊಬ್ಬನ ಸಂಖ್ಯೆ. ಒಂದು ಪ್ರಮುಖ ಘಟನೆಯನ್ನು ಪೂರ್ಣಗೊಳಿಸಿದ ಅಥವಾ ಜೀವನದ ಒಂದು ನಿರ್ದಿಷ್ಟ ಅಧ್ಯಾಯ ಅಂತಿಮಘಟ್ಟಕ್ಕೆ ತಲುಪಿದ್ದರ ಸಾಂಕೇತವಾಗಿ ಈ ಸಂಖ್ಯೆ ಬಳಸಲಾಗುತ್ತದೆ ಎಂದಿದ್ದಾರೆ.

ಅಂತಿಮವಾಗಿ... 2020 ರಲ್ಲಿ ನಡೆದ ಕಹಿ ಘಟನೆಗಳನ್ನು ಪರಿಗಣಿಸಿ, ಒಬ್ಬ ಟ್ವಿಟ್ಟರ್ ಬಳಕೆದಾರರು 1929 ರ ಮಹಾ ಕುಸಿತವನ್ನು ಧೋನಿಯ ಪೋಸ್ಟ್‌ನ ಸಮಯದೊಂದಿಗೆ ಹೋಲಿಕೆ ಮಾಡಿದ್ದಾರೆ.

ನಿರ್ದಿಷ್ಟ ಸಮಯವನ್ನು ಉಲ್ಲೇಖಿಸಿ ಧೋನಿ ತಮ್ಮ ನಿವೃತ್ತಿ ಘೋಷಣೆ ಮಾಡಿರುವುದರ ಹಿಂದಿನ ನಿಜವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಬಹುಶಃ ಇದು ಕೇವಲ ಕಾಕತಾಳೀಯವಿರಬಹುದು. ಇಲ್ಲವೇ ಕಾರಣವೂ ಇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT