ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ವಿಶ್ವಕಪ್‌ಗೆ ಅಫ್ಗಾನಿಸ್ತಾನ ತಂಡ: ವೇಗಿ ನವೀನ್ ಉಲ್ ಹಕ್‌ಗೆ ಸ್ಥಾನ

Published 13 ಸೆಪ್ಟೆಂಬರ್ 2023, 14:21 IST
Last Updated 13 ಸೆಪ್ಟೆಂಬರ್ 2023, 14:21 IST
ಅಕ್ಷರ ಗಾತ್ರ

ಕಾಬೂಲ್: ವೇಗದ ಬೌಲರ್‌ ನವೀನ್‌–ಉಲ್‌–ಹಕ್ ಅವರನ್ನು ಮುಂದಿನ ತಿಂಗಳ 5ರಂದು ಆರಂಭವಾಗುವ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಆಡುವ 15 ಮಂದಿ ಆಟಗಾರರ ಅಫ್ಗಾನಿಸ್ತಾನ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಆದರೆ ಇತ್ತಿಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಲ್‌ರೌಂಡರ್‌ ಗುಲ್ಬದಿನ್ ನಯೀಬ್ ಅವರನ್ನು ಕೈಬಿಡಲಾಗಿದೆ. 32 ವರ್ಷದ ನಯೀಬ್ ಅವರು ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಅಲ್ಲಿ ತಂಡ ಆಡಿದ ಎಲ್ಲ 9 ಪಂದ್ಯಗಳನ್ನು ಸೋತಿದ್ದು ಅವರನ್ನು ಕಿತ್ತುಹಾಕಲಾಗಿತ್ತು.

ಆದರೆ ಅವರು ಕಳೆದ ವಾರ ಲಾಹೋರ್‌ನಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 60 ರನ್ನಿಗೆ 4 ವಿಕೆಟ್‌ ಸೇರಿದಂತೆ ಮೂರು ಏಕದಿನ ಪಂದ್ಯಗಳಲ್ಲಿ ಏಳು ವಿಕೆಟ್ ಕಬಳಿಸಿದ್ದರು.

ಏಳು ಏಕದಿನ ಪಂದ್ಯಗಳನ್ನು ಆಡಿರುವ ನವೀನ್ ತಮ್ಮ ಕೊನೆಯ ಪಂದ್ಯವನ್ನು 2021ರ ಜನವರಿಯಲ್ಲಿ ಐರ್ಲೆಂಡ್ ವಿರುದ್ಧ ಆಡಿದ್ದರು.

ನಯೀಬ್ ಜೊತೆ ಏಷ್ಯಾ ಕಪ್ ತಂಡದಲ್ಲಿ ಆಡಿದ್ದ ಕರೀಮ್ ಜನತ್, ಶರ್ಫುದ್ದೀನ್ ಅಶ್ರಫ್ ಮತ್ತು ಸುಲಿಮಾನ್ ಸಫಿ ಅವರನ್ನೂ ಕೈಬಿಡಲಾಗಿದೆ.

ಅಫ್ಗಾನಿಸ್ಗಾನ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 7ರಂದು ಧರ್ಮಶಾಲಾದಲ್ಲಿ ಬಾಂಗ್ಲಾದೇಶ ವಿರುದ್ಧ ಆಡುವುದರೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

ತಂಡ ಹೀಗಿದೆ: ಹಷ್ಮತ್ಉಲ್ಲಾ ಶಾಹಿದಿ (ನಾಯಕ), ರಹಮತ್‌ಉಲ್ಲಾ ಗುರ್ಬಾಝ್, ಇಬ್ರಾಹಿಂ ಜರ್ದಾನ್, ರಿಯಾಝ್ ಹಸನ್, ರಹಮತ್ ಶಾ, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತ್‌ಉಲ್ಲಾ ಒಮ್ರಾಝೈ, ರಷೀದ್ ಖಾನ್, ಮುಜೀಬ್ ಉರ್‌ ರಹಮಾನ್, ನೂರ್ ಅಹ್ಮದ್, ಫಝಲಖ್ ಫಾರೂಖಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT