ಬುಧವಾರ, ಆಗಸ್ಟ್ 10, 2022
24 °C

90 ಮೀಟರ್ಸ್ ಸಾಧನೆ ಕೈಗೂಡುವ ವಿಶ್ವಾಸವಿದೆ- ನೀರಜ್ ಚೋಪ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಟಾಕ್‌ಹೋಮ್: ಟೋಕಿಯೊ ಒಲಿಂಪಿಕ್ಸ್‌ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ ಡೈಮಂಡ್ ಲೀಗ್ ಕೂಟದಲ್ಲಿ  ಅಲ್ಪ ಅಂತರದಲ್ಲಿ 90 ಮೀಟರ್ ದೂರ ಎಸೆತದ ದಾಖಲೆಯನ್ನು ಕೈತಪ್ಪಿಸಿಕೊಂಡರು. 

ಗುರುವಾರ ನಡೆದ ಡೈಮಂಡ್ ಲೀಗ್‌ನಲ್ಲಿ 24 ವರ್ಷದ ನೀರಜ್ 89.94 ಮೀಟರ್ಸ್‌ ಎಸೆತ ಸಾಧಿಸಿದರು. ಇದರೊಂದಿಗೆ ತಮ್ಮ ರಾಷ್ಟ್ರೀಯ ದಾಖಲೆ (89.30 ಮೀ) ಯನ್ನು ಉತ್ತಮಪಡಿಸಿಕೊಂಡರು. ಅಲ್ಲದೇ ಬೆಳ್ಳಿ ಪದಕ ಜಯಿಸಿದರು.  ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ (90.31 ಮೀ) ಚಿನ್ನದ ಪದಕ ಗಳಿಸಿದರು.

‘ಮೊದಲ ಥ್ರೋ ಮಾಡಿದಾಗ ಖುಷಿಪಟ್ಟಿದ್ದೆ. 90 ಮೀಟರ್ಸ್‌ ದಾಟುವ ಭರವಸೆ ಮೂಡಿತ್ತು. ಆದರೆ ಸಾಧ್ಯವಾಗಲಿಲ್ಲ. ಇರಲಿ.  ಈ ವರ್ಷ ಇನ್ನೂ ಬಹಳಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದೇನೆ. 90 ಮೀಟರ್ಸ್ ದಾಟುವುದು ಖಚಿತ’ ಎಂದು ನೀರಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಆ್ಯಂಡರ್ಸನ್ ಪೀಟರ್ಸನ್‌ ಅವರು ತೊಂಬತ್ತು ಮೀಟರ್ಸ್ ದಾಟಿದರು. ಜಾವೆಲಿನ್ ಒಂದೇ ಲೈನ್‌ನಲ್ಲಿ ಹೋಗಬೇಕು. ಜೊತೆಗೆ ತಾಂತ್ರಿಕ ಕೌಶಲ ಕರಾರುವಾಕ್ ಆಗಿರಬೇಕು. ಆಗಲೇ ಹೆಚ್ಚು ದೂರ ಕ್ರಮಿಸಲು ಸಾಧ್ಯವಿದೆ’ ಎಂದರು. 

ಇದೇ 15 ರಿಂದ 24ರವರೆಗೆ ಅಮೆರಿಕದ ಯುಗೆನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಸ್ಪರ್ಧಿಸಲಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು