ನೆಟ್ ಬೌಲರ್ ಇಶಾನ್ ಪೊರೆಲ್‌ಗೆ ಗಾಯ

ನವದೆಹಲಿ: ಆಸ್ಟ್ರೇಲಿಯಾದಲ್ಲಿರುವ ಭಾರತ ತಂಡಕ್ಕೆ ನೆಟ್ಸ್ ಅಭ್ಯಾಸದಲ್ಲಿ ಬೌಲಿಂಗ್ ಮಾಡಲು ತೆರಳಿರುವ ಬಂಗಾಳದ ಬೌಲರ್ ಇಶಾನ್ ಪೊರೆಲ್ ಗಾಯಗೊಂಡಿದ್ದಾರೆ.
ನೆಟ್ಸ್ ಅಭ್ಯಾಸದ ಸಂದರ್ಭದಲ್ಲಿ ಅವರು ಸ್ನಾಯುಸೆಳೆತದಿಂದ ಬಳಲಿದರು. ಅದರಿಂದಾಗಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಭಾರತಕ್ಕೆ ಮರಳಿ ಕಳಿಸಲಾಗಿದೆ.
’ಇಶಾನ್ ಪೊರೆಲ್ ಸ್ಹಾಯುಸೆಳೆತಕ್ಕೊಳಗಾಗಿದ್ದಾರೆ. ಆದರೆ ಗಾಯದ ಗಂಭೀರತೆ ಕುರಿತು ಗೊತ್ತಿಲ್ಲ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಅವರನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುವುದು. ಆದ್ದರಿಂದ ಅವರು ಭಾರತಕ್ಕೆ ಮರಳಲಿದ್ದಾರೆ‘ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ತಂಡಕ್ಕೆ ನೆಟ್ಸ್ ಬೌಲರ್ ಆಗಿ ಈಗ ಕಾರ್ತಿಕ್ ತ್ಯಾಗಿ ಮಾತ್ರ ಉಳಿದುಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.