ಭಾನುವಾರ, ಮಾರ್ಚ್ 26, 2023
23 °C

ವಿಲಿಯಮ್ಸನ್‌, ಹೆನ್ರಿ ದ್ವಿಶತಕ; ಲಂಕಾ ವಿರುದ್ಧ ನ್ಯೂಜಿಲೆಂಡ್ ಬೃಹತ್‌ ಮೊತ್ತ

ಎಪಿ Updated:

ಅಕ್ಷರ ಗಾತ್ರ : | |

Prajavani

ವೆಲಿಂಗ್ಟನ್‌: ಕೇನ್‌ ವಿಲಿಯಮ್ಸನ್‌ (215) ಮತ್ತು ಹೆನ್ರಿ ನಿಕಲ್ಸ್‌ (ಔಟಾಗದೆ 200) ಅವರ ದ್ವಿಶತಕಗಳ ನೆರವಿನಿಂದ ನ್ಯೂಜಿಲೆಂಡ್‌ ತಂಡ, ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಬೃಹತ್‌ ಮೊತ್ತ ಕಲೆಹಾಕಿದೆ.

ವೆಲಿಂಗ್ಟನ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ ಆತಿಥೇಯ ತಂಡ 4 ವಿಕೆಟ್‌ಗಳಿಗೆ 580 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ದಿನದಾಟದ ಅಂತ್ಯಕ್ಕೆ ಶ್ರೀಲಂಕಾ, ಎರಡು ವಿಕೆಟ್‌ಗಳಿಗೆ 26 ರನ್‌ ಗಳಿಸಿತ್ತು.

ಎರಡು ವಿಕೆಟ್‌ ನಷ್ಟಕ್ಕೆ 155 ರನ್‌ಗಳಿಂದ ಶನಿವಾರ ಆಟ ಮುಂದುವರಿಸಿದ ನ್ಯೂಜಿಲೆಂಡ್‌ ತಂಡವನ್ನು ವಿಲಿಯಮ್ಸನ್‌ ಮತ್ತು ನಿಕಲ್ಸ್‌ ಉತ್ತಮ ಮೊತ್ತದತ್ತ ಮುನ್ನಡೆಸಿದರು. ಇವರು ಮೂರನೇ ವಿಕೆಟ್‌ಗೆ 363 ರನ್‌ ಸೇರಿಸಿದರು.

ಆರನೇ ದ್ವಿಶತಕ ಗಳಿಸಿದ ವಿಲಿಯಮ್ಸನ್‌ 296 ಎಸೆತಗಳನ್ನು ಎದುರಿಸಿ 23 ಬೌಂಡರಿ ಮತ್ತು 2 ಸಿಕ್ಸರ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌
ಮೊದಲ ಇನಿಂಗ್ಸ್‌
ನ್ಯೂಜಿಲೆಂಡ್: 123 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 580 (ಕೇನ್‌ ವಿಲಿಯಮ್ಸನ್‌ 215, ಹೆನ್ರಿ ನಿಕಲ್ಸ್‌ ಔಟಾಗದೆ 200, ಕಸುನ್‌ ರಜಿತಾ 126ಕ್ಕೆ 2)

ಶ್ರೀಲಂಕಾ: 17 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 26 (ದಿಮುತ್‌ ಕರುಣರತ್ನೆ ಬ್ಯಾಟಿಂಗ್‌ 16, ಪ್ರಭಾತ್‌ ಜಯಸೂರ್ಯ ಬ್ಯಾಟಿಂಗ್‌ 4, ಡಗ್‌ ಬ್ರೇಸ್‌ವೆಲ್‌ 1ಕ್ಕೆ 1)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು