ಹ್ಯಾಮಿಲ್ಟನ್ : ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ (123ಕ್ಕೆ5) ಅವರ ಪರಿಣಾಮಕಾರಿ ದಾಳಿಯ ಬಲದಿಂದ ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಇನಿಂಗ್ಸ್ ಮತ್ತು 52ರನ್‌ಗಳಿಂದ ಜಯಭೇರಿ ಮೊಳಗಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿದೆ.

ಸೆಡನ್ ಪಾರ್ಕ್ ಅಂಗಳದಲ್ಲಿ 4 ವಿಕೆಟ್‌ಗೆ 174ರನ್‌ಗಳಿಂದ ಭಾನುವಾರ ಆಟ ಮುಂದುವರಿಸಿದ ಬಾಂಗ್ಲಾ 103 ಓವರ್‌ಗಳಲ್ಲಿ 429ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ನಾಲ್ಕೇ ದಿನಗಳಲ್ಲಿ ಪಂದ್ಯ ಮುಗಿಯಿತು.

ಮೂರನೇ ದಿನದಾಟದಲ್ಲಿ ಎಚ್ಚರಿಕೆಯ ಇನಿಂಗ್ಸ್ ಕಟ್ಟಿದ್ದ ಸೌಮ್ಯ ಸರ್ಕಾರ್ (149; 171ಎ, 21ಬೌಂ, 5ಸಿ) ಮತ್ತು ನಾಯಕ ಮಹಮದುಲ್ಲಾ (146; 229ಎ, 21ಬೌಂ, 3ಸಿ) ಭಾನುವಾರವೂ ದಿಟ್ಟ ಆಟ ಆಡಿದರು. ನ್ಯೂಜಿಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಇವರು ಶತಕಗಳ ಸಂಭ್ರಮ ಆಚರಿಸಿದರು. ಹೀಗಿದ್ದರೂ ತಂಡಕ್ಕೆ ಗೆಲುವು ಕೈಗೆಟುಕದಾಯಿತು.

ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ: ಮೊದಲ ಇನಿಂಗ್ಸ್, 59.2 ಓವರ್‌ಗಳಲ್ಲಿ 234 ಮತ್ತು 103 ಓವರ್‌ಗಳಲ್ಲಿ 429 (ಸೌಮ್ಯ ಸರ್ಕಾರ್ 149, ಮಹಮದುಲ್ಲಾ 146; ಟ್ರೆಂಟ್ ಬೌಲ್ಟ್ 123ಕ್ಕೆ5, ಟಿಮ್ ಸೌಥಿ 98ಕ್ಕೆ3, ನೀಲ್ ವಾಗ್ನರ್ 104ಕ್ಕೆ2).

ನ್ಯೂಜಿಲೆಂಡ್: ಪ್ರಥಮ ಇನಿಂಗ್ಸ್: 163 ಓವರ್‌ಗಳಲ್ಲಿ 6 ವಿಕೆಟ್‌ಗೆ 715 ಡಿಕ್ಲೇರ್ಡ್.

ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ ಇನಿಂಗ್ಸ್ ಮತ್ತು 52ರನ್‌ಗಳ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ಪಂದ್ಯ ಶ್ರೇಷ್ಠ: ಕೇನ್ ವಿಲಿಯಮ್ಸನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.