ಸೋಮವಾರ, ಜೂನ್ 21, 2021
30 °C

ಟೆಸ್ಟ್‌: ಮೂರನೇ ದಿನದಾಟಕ್ಕೆ ಮಳೆ ಅಡ್ಡಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್: ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರವೂ ಮಳೆ ಕಾಡಿತು. ಹೀಗಾಗಿ ಒಂದು ಎಸೆತವನ್ನು ಕೂಡ ಹಾಕಲಾಗಲಿಲ್ಲ. ಮೊದಲ ದಿನವಾದ ಗುರುವಾರ 45.4 ಓವರ್‌ಗಳ ಆಟ ಮಾತ್ರ ನಡೆದಿತ್ತು. ಪಾಕಿಸ್ತಾನ ಐದು ವಿಕೆಟ್‌ಗಳಿಗೆ 126 ರನ್ ಗಳಿಸಿತ್ತು. ಶುಕ್ರವಾರವೂ ಮಳೆ ಮತ್ತು ಮಂದಬೆಳಕು ಕಾಡಿತ್ತು. ಕುಸಿತದಿಂದ ತಂಡವನ್ನು ರಕ್ಷಿಸಿದ್ದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರ ಅರ್ಧಶತಕದಿಂದಾಗಿ ಪಾಕಿಸ್ತಾನ ಒಂಬತ್ತು ವಿಕೆಟ್‌ ಕಳೆದುಕೊಂಡು 223 ರನ್ ಕಲೆ ಹಾಕಿತ್ತು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ, ಮೊದಲ ಇನಿಂಗ್ಸ್‌: 86 ಓವರ್‌ಗಳಲ್ಲಿ 9ಕ್ಕೆ 223 (ಬಾಬರ್ ಆಜಂ 47, ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ 60; ಜೇಮ್ಸ್ ಆ್ಯಂಡರ್ಸನ್ 48ಕ್ಕೆ3, ಸ್ಟುವರ್ಟ್ ಬ್ರಾಡ್ 56ಕ್ಕೆ3, ಸ್ಯಾಮ್ ಕರನ್ 44ಕ್ಕೆ1, ಕ್ರಿಸ್ ವೋಕ್ಸ್ 55ಕ್ಕೆ1). ಎರಡನೇ ದಿನವಾದ ಶುಕ್ರವಾರದ ಮುಕ್ತಾಯಕ್ಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.