ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ನಿವೃತ್ತಿಗೆ ಕಾರಣಗಳೇ ಇಲ್ಲ: ಮೊಹಮ್ಮದ್ ಕೈಫ್

Published 24 ಮೇ 2024, 14:27 IST
Last Updated 24 ಮೇ 2024, 14:27 IST
ಅಕ್ಷರ ಗಾತ್ರ

ಮುಂಬೈ: ಮಹೇಂದ್ರಸಿಂಗ್ ಧೋನಿ ಅವರು ಕ್ರಿಕೆಟ್‌ನಿಂದ ನಿವೃತ್ತರಾಗಲು ಯಾವುದೇ ಕಾರಣಗಳು ಇಲ್ಲ. ಅವರ ಫಾರ್ಮ್, ಫಿಟ್‌ನೆಸ್‌ ಮತ್ತು ದೊಡ್ಡ ಹೊಡೆತಗಳನ್ನು ಆಡುವ ಸಾಮರ್ಥ್ಯ ಅವರಿಗೆ ಇದೆ. ಮುಂದಿನ ವರ್ಷವೂ ಅವರೇಕೆ ಆಡಬಾರದು ಎಂದು ವೀಕ್ಷಕ ವಿವರಣೆಗಾರ ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ 42 ವರ್ಷದ ಧೋನಿ ಅವರು ಮುಂದಿನ ವರ್ಷ ಆಡುವುದು ಅನುಮಾನ. ಅವರು ಕ್ರಿಕೆಟ್‌ನಿಂದ ವಿದಾಯ ಘೋಷಿಸಲಿದ್ಧಾರೆಂಬ ಮಾತುಗಳು ಕೇಳಿಬಂದಿದ್ದವು. 

ಈ ಕುರಿತು ಸ್ಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಕೈಫ್, ‘ಅವರ ಸಾಮರ್ಥ್ಯ ಮುಗಿದಿದೆ ಎಂದು ನನಗಂತೂ ಅನಿಸುವುದಿಲ್ಲ. ಈಚೆಗೆ  ನಡೆದ ಪಂದ್ಯದಲ್ಲಿ (ಆರ್‌ಸಿಬಿ ಎದುರು) ಅವರು ಆಡಿದ ರೀತಿ ಹಾಗಿತ್ತು. ಕೊನೆಯ ಓವರ್‌ನಲ್ಲಿ ಅವರು ದೊಡ್ಡ ಸಿಕ್ಸರ್ ಹೊಡೆದ ನಂತರ ಇನ್ನೊಂದು ಎಸೆತದಲ್ಲಿ ಔಟಾಗಿದ್ದರು. ಅವರ ಹಾವಭಾವಗಳನ್ನು ನೋಡಿದರೂ ಸಾಕು. ಇನ್ನೂ ಬಹಳಷ್ಟು ಆಟ ಅವರಲ್ಲಿ ಬಾಕಿ ಇದೆ ಎನಿಸದಿರದು’ಎಂದರು. 

‘ಫಿಟ್ ಆಗಿದ್ದಾರೆ. ರನ್‌ಗಳನ್ನು ಗಳಿಸುತ್ತಿದ್ದು, ಎತ್ತರದ ಸಿಕ್ಸರ್‌ಗಳನ್ನು ಸಿಡಿಸುತ್ತಿದ್ದಾರೆ. ಅವರು ನಿವೃತ್ತಿಯಾಗಬೇಕೆಂದು ಹೇಳಲು ಕಾರಣಗಳು ಇಲ್ಲ. ಆದರೆ ಧೋನಿ ಮನದಲ್ಲಿ ಏನಿದೆ ಎಂಬುದನ್ನು ಹೇಳುವುದು ಕಷ್ಟ. ಅವರ ಯೋಜನೆ ಯಾವ ರೀತಿ ಇದೆ ಎಂಬುದೂ ಗೊತ್ತಿಲ್ಲ’ ಎಂದು ಕೈಫ್ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT