ಮಂಗಳವಾರ, ಸೆಪ್ಟೆಂಬರ್ 29, 2020
27 °C

ಕ್ರಿಕೆಟ್ ಕೋಚ್ ‘ಬಾಬಿ ಸಾಹೇಬ್’ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್‌ಕೋಟ್: ಸೌರಾಷ್ಟ್ರದ ಖ್ಯಾತ ಕ್ರಿಕೆಟ್ ಕೋಚ್ ಅಕ್ಬರ್‌ಖಾನ್ ಬಾಬಿ (80)  ನಿಧನರಾದರು.

‘ಬಾಬಿ ಸಾಹೇಬ್’ ಎಂದೇ ಚಿರಪರಿಚಿತರಾಗಿದ್ದ ಅವರು ಕೆಲಕಾಲದಿಂದ ಅಸ್ವಸ್ಥರಾಗಿದ್ದರು. ಬುಧವಾರ ಕೊನೆಯುಸಿರೆಳೆದರು ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯು ತಿಳಿಸಿದೆ.

ಕಳೆದ ನಾಲ್ಕು ದಶಕಗಳಿಂದ ರಾಜ್‌ಕೋಟ್ ಮತ್ತಿತರ ನಗರಗಳಲ್ಲಿ ಕ್ರಿಕೆಟಿಗರಿಗೆ ತರಬೇತಿ ನೀಡುತ್ತಿದ್ದರು. ಸೌರಾಷ್ಟ್ರದಿಂದ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದ ಧೀರಜ್ ಪರಸಾನಾ, ಉದಯ್ ಜೋಶಿ, ನಿರಂಜನ್ ಮೆಹ್ತಾ, ಮಹೇಂದ್ರ ರಾಜದೇವ್ ಅವರು ಬಾಬಿ ಮಾರ್ಗದರ್ಶನದಲ್ಲಿ ಬೆಳೆದಿದ್ದರು.

ಭಾರತ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕೂಡ ಕೆಲ ಸಮಯ ಬಾಬಿ ಅವರಿಂದ ತರಬೇತಿ ಪಡೆದಿದ್ದರು.

‘ಭಾರತದಲ್ಲಿ ಆಸ್ಟ್ರೇಲಿಯಾ ಮಾದರಿಯ ತರಬೇತಿಯನ್ನು ರೂಢಿಗೆ ತಂದ ಮೊದಲ ಕೋಚ್ ಬಾಬಿ.  ಬಿಸಿಸಿಐನಲ್ಲಿಯೂ ಅವರು ಕಾರ್ಯನಿರ್ವಹಿಸಿದ್ದರು’ ಎಂದು ಎಸ್‌ಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು