ಶುಕ್ರವಾರ, ಜುಲೈ 1, 2022
25 °C
ಲಥಾಮ್‌, ಗ್ರ್ಯಾಂಡ್‌ಹೋಮ್‌ಗೆ ಸ್ಥಾನ

ಭಾರತದ ಎದುರಿನ ಏಕದಿನ ಕ್ರಿಕೆಟ್‌ ಸರಣಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವೆಲ್ಲಿಂಗ್ಟನ್‌: ಮುಂದಿನ ವಾರ ನೇಪಿಯರ್‌ನಲ್ಲಿ ನಡೆಯುವ ಭಾರತದ ಎದುರಿನ ಐದು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಗುರುವಾರ ನ್ಯೂಜಿಲೆಂಡ್‌ ತಂಡವನ್ನು ಪ್ರಕಟಿಸಲಾಗಿದೆ.

ಟಾಮ್‌ ಲಥಾಮ್‌ ಮತ್ತು ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಶ್ರೀಲಂಕಾ ಎದುರಿನ ಸರಣಿಗೆ ಇವರು ಅಲಭ್ಯರಾಗಿದ್ದರು. ವೇಗದ ಬೌಲರ್‌ ಟ್ರೆಂಟ್‌ ಬೌಲ್ಟ್‌ ಕೂಡಾ ತಂಡಕ್ಕೆ ಮರಳಿದ್ದಾರೆ.

ಕೇನ್‌ ವಿಲಿಯಮ್ಸನ್‌ ಅವರು ಸರಣಿಯಲ್ಲಿ ಕಿವೀಸ್‌ ನಾಡಿನ ಬಳಗವನ್ನು ಮುನ್ನಡೆಸಲಿದ್ದಾರೆ.

‘ಮುಂಬರುವ ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವುದು ನಮ್ಮ ಉದ್ದೇಶ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತದ ಎದುರಿನ ಸರಣಿಗೆ 14 ಸದಸ್ಯರ ತಂಡವನ್ನು ಪ್ರಕಟಿಸಿದ್ದೇವೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ವಿರಾಟ್‌ ಕೊಹ್ಲಿ ಬಳಗವನ್ನು ಮಣಿಸುವ ಸಾಮರ್ಥ್ಯ ಈ ತಂಡಕ್ಕಿದೆ’ ಎಂದು ನ್ಯೂಜಿಲೆಂಡ್‌ ತಂಡದ ಮುಖ್ಯ ಕೋಚ್‌ ಗ್ಯಾರಿ ಸ್ಟೀಡ್‌ ತಿಳಿಸಿದ್ದಾರೆ.

ತಂಡ ಇಂತಿದೆ: ಕೇನ್‌ ವಿಲಿಯಮ್ಸನ್‌ (ನಾಯಕ), ಟ್ರೆಂಟ್‌ ಬೌಲ್ಟ್‌, ಡಾಗ್‌ ಬ್ರೇಸ್‌ವೆಲ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಲೂಕಿ ಫರ್ಗ್ಯೂಸನ್‌, ಮಾರ್ಟಿನ್‌ ಗಪ್ಟಿಲ್‌, ಮ್ಯಾಟ್‌ ಹೆನ್ರಿ, ಟಾಮ್‌ ಲಥಾಮ್‌, ಕಾಲಿನ್‌ ಮನ್ರೊ, ಹೆನ್ರಿ ನಿಕೋಲ್ಸ್‌, ಮಿಷೆಲ್‌ ಸ್ಯಾಂಟನರ್‌, ಈಶ್‌ ಸೋಧಿ, ಟಿಮ್‌ ಸೌಥಿ ಮತ್ತು ರಾಸ್‌ ಟೇಲರ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು