ಟಿ20: ವೇಗದ ಶತಕ ಬಾರಿಸಿದ ಗ್ಲೆನ್ ಫಿಲಿಫ್ಸ್; ನ್ಯೂಜಿಲೆಂಡ್ಗೆ 72 ರನ್ ಗೆಲುವು

ಆಕ್ಲೆಂಡ್: ಮೌಂಟ್ ಮೌಗಾನುಯ್ನಲ್ಲಿರುವ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಸರಣಿಯ 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ತಂಡವನ್ನು72 ರನ್ಗಳಿಂದ ಪರಾಭವಗೊಳಿಸಿದೆ.
ನ್ಯೂಜಿಲೆಂಡ್ನ ಗ್ಲೆನ್ ಫಿಲಿಫ್ಸ್ 46 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ.
ಫಿಲಿಫ್ಸ್ ಅವರ ಈ ಶತಕವು ವಿಶ್ವದ ವೇಗದ ಶತಕಗಳಲ್ಲೊಂದಾಗಿದೆ, ಫಿಲಿಪ್ಸ್ 51 ಎಸೆತಗಳಲ್ಲಿ 108 ರನ್ ದಾಖಲಿಸಿದ್ದು ಇದರಲ್ಲಿ 8 ಸಿಕ್ಸರ್ ಮತ್ತು 10 ಬೌಂಡರಿಗಳು ಸೇರಿವೆ.
ಟಾಸ್ ಗೆದ್ದು ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು, ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 238 ರನ್ ದಾಖಲಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ನಿಗದಿತ ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು 166 ರನ್ ದಾಖಲಿಸಲಷ್ಟೇ ಸಾಧ್ಯವಾಯಿತು.
New Zealand's fastest T20I century 🔥
Two catches and a run out 👏Glenn Phillips is named the Player of the Match after a stellar show in the second #NZvWI T20I! pic.twitter.com/v4RLSfP4B6
— ICC (@ICC) November 29, 2020
ಸಂಕ್ಷಿಪ್ತ ಸ್ಕೋರ್:
ನ್ಯೂಜಿಲೆಂಡ್: 3 ವಿಕೆಟ್ ನಷ್ಟಕ್ಕೆ 238 ರನ್ಗಳು
ಗ್ಲೆನ್ ಫಿಲಿಫ್ಸ್: 108 ರನ್ (51)
ಕಾನ್ವೇ: 65 ರನ್ (37)
ಗಪ್ಟಿಲ್: 34 ರನ್ (23)
ವೆಸ್ಟ್ ಇಂಡೀಸ್: 9 ವಿಕೆಟ್ ನಷ್ಟಕ್ಕೆ 166 ರನ್ಗಳು
ಕಿರನ್ ಪೊಲಾರ್ಡ್: 28 ರನ್ (15)
ಕೀಮೊ ಪೌಲ್: 26 ರನ್ (18)
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.