ನವದೆಹಲಿ: ದೇಶದ ಪ್ರಮುಖ ಕ್ರಿಕೆಟ್ ಆಯೋಜನೆಯ ಕೆಲವು ತಾಣಗಳಿಗೆ ಈ ಬಾರಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಅವಕಾಶ ಸಿಕ್ಕಿಲ್ಲ.

ಮಂಗಳವಾರ ಐಸಿಸಿಯು ವೇಳಾಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಅವಕಾಶ ಸಿಗದ ರಾಜ್ಯ ಸಂಸ್ಥೆಗಳು ಅಸಮಾಧಾನವ್ಯಕ್ತಪಡಿಸಿವೆ. ಇದಕ್ಕೆ ದನಿಗೂಡಿಸಿರುವ ಕೆಲವು ಧುರೀಣರೂ ’ವೇಳಾಪಟ್ಟಿಯಲ್ಲಿ ರಾಜಕೀಯ ದುರುದ್ದೇಶ ಇದೆ‘ ಎಂದು ಆರೋಪಿಸಿದ್ದಾರೆ.

’ತಿರುವನಂತಪುರದ ಕ್ರಿಕೆಟ್ ಮೈದಾನವು ಉತ್ತಮವಾಗಿದೆ ಎಂದು ಹಲವು ವರ್ಷಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇಲ್ಲಿಗೆ ಒಂದೂ ಪಂದ್ಯ ಆಯೋಜನೆಗೆ ಲಭಿಸದಿರುವುದು ಆಘಾತ ಮೂಡಿಸಿದೆ‘ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

’ಅಹಮದಾಬಾದ್ ಈಗ ಹೊಸ ಕ್ರಿಕೆಟ್ ರಾಜಧಾನಿಯಾಗುತ್ತಿದೆ. ಆದರೆ ಕೇರಳಕ್ಕೆ ಒಂದು ಅಥವಾ ಎರಡು ಪಂದ್ಯಗಳನ್ನು ಮಂಜೂರು ಮಾಡಲು ಏಕೆ ಸಾಧ್ಯವಾಗಿಲ್ಲ‘ ಎಂದು ತರೂರ್ ಪ್ರಶ್ನಿಸಿದ್ದಾರೆ.

ಪ್ರಮುಖ ತಾಣಗಳಾದ ಮೊಹಾಲಿ, ನಾಗಪುರ, ಇಂದೋರ್, ರಾಜ್ಕೋಟ್ ಮತ್ತು ನಾಗಪುರ ನಗರಳಗಳ ಕ್ರೀಡಾಂಗಣಗಳಿಗೆ ಈ ಬಾರಿ ವಿಶ್ವಕಪ್ ಪಂದ್ಯಗಳನ್ನು ನೀಡಿಲ್ಲ. ಈ ಹಿಂದೆ ನಡೆದ ವಿಶ್ವಕಪ್ ಟೂರ್ನಿಗಳಲ್ಲಿ ವಲಯಮಟ್ಟದಲ್ಲಿ ಮತ್ತು ಇನ್ನೂ ಕೆಲವು ಸಲ ಪ್ರಭಾವಿ ಪದಾಧಿಕಾರಿಗಳ ಒತ್ತಡದ ಆಧಾರದಲ್ಲಿ ಪಂದ್ಯಗಳನ್ನು ಮೆಟ್ರೊ ನಗರಿಗಳಿಗೆ ನೀಡಲಾಗಿತ್ತು.

ಇದು ಜಾಗತಿಕ ಮಟ್ಟದ ಟೂರ್ನಿಯಾಗಿರುವುದರಿಂದ ಬಿಸಿಸಿಐ ನೀಡುವ ತಾಣಗಳ ಪಟ್ಟಿಯಲ್ಲಿ ಐಸಿಸಿ ಸಮಿತಿಯು ನಗರಗಳನ್ನು ಅಂತಿಮಗೊಳಿಸುತ್ತದೆ. ಮಧ್ಯಪ್ರದೇಶದ ಇಂದೋರ್ ನಗರವು ಈ ಹಿಂದೆ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಿದೆ. ಆದರೆ ಈ ಸಲ ಲಭಿಸಿಲ್ಲ.

‘1987ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪಂದ್ಯವು ಇಂದೋರ್ನಲ್ಲಿ ನಡೆದಿತ್ತು. ಅಲ್ಲದೇ ನಮ್ಮ ನಗರಕ್ಕೆ ಕ್ರಿಕೆಟ್ ಆಟದ ಶ್ರೀಮಂತ ಇತಿಹಾಸವೂ ಇದೆ. ಆದ್ದರಿಂದ ಈ ಬಾರಿಯೂ ವಿಶ್ವಕಪ್ ಪಂದ್ಯ ಸಿಗುವ ನಿರೀಕ್ಷೆ ಇತ್ತು. ಆದರೆ ಬಿಸಿಸಿಐ ಲೆಕ್ಕಾಚಾರ ಅರ್ಥವಾಗುತ್ತಿಲ್ಲ‘ ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಭಿಲಾಷ್ ಖಾಂಡೇಕರ್ ಬೇಸರ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ 11 ಹಾಗೂ 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ 14 ತಾಣಗಳನನ್ನು ಐಸಿಸಿ ಆಯ್ದುಕೊಂಡಿತ್ತು. ತಂಡಗಳ ಪ್ರಯಾಣ, ಸರಂಜಾಮು ಸಾಗಣೆಗೆ ಹೆಚ್ಚು ಹೊರೆಯಾಗದಂತೆ ತಾಣಗಳನ್ನು ಆಯ್ಕೆ ಮಾಡುವುದು ವಾಡಿಕೆ. ಆದರೆ ಇಂತಿಷ್ಟೆ ಸಂಖ್ಯೆ ಸ್ಥಳಗಳನ್ನು ಆಯ್ಕೆ ಮಾಡಬೇಕೆಂಬ ನಿಯಮವೇನಿಲ್ಲ.

‘ಭಾರತದಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತಿರುವುದು ಸಂತಸದ ವಿಷಯ. ಆದರೆ, ದೇಶಕ್ಕೆ ಮಹಾನ್ ಕ್ರಿಕೆಟಿಗರನ್ನು ಕೊಡುಗೆಯಾಗಿ ನೀಡಿದ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಮೊಹಾಲಿ ಕ್ರೀಡಾಂಗಣಕ್ಕೆ ಈ ಬಾರಿ ಒಂದೂ ಪಂದ್ಯ ಕೊಟ್ಟಿಲ್ಲ. 1996 ಮತ್ತು 2011ರಲ್ಲಿ ಇಲ್ಲಿ ಪಂದ್ಯಗಳು ಯಶಸ್ವಿಯಾಗಿ ನಡೆದಿವೆ. ಇದರ ಹಿಂದೆ ರಾಜಕೀಯ ಕುತಂತ್ರವಿದೆ‘ ಎಂದು ಪಂಜಾಬ್ ಕ್ರೀಡಾ ಸಚಿವ ಗುರಮೀತ್ ಸಿಂಗ್ ಹೇಳಿದ್ದಾರೆ.

’ಅಹಮದಾಬಾದ್ ಕ್ರೀಡಾಂಗಣದಲ್ಲಿ ಉದ್ಘಾಟನೆ ಪಂದ್ಯ, ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಹಾಗೂ ಫೈನಲ್ ಪಂದ್ಯ ನಡೆಯಲಿವೆ. ಧರ್ಮಶಾಲಾ ಕ್ರೀಡಾಂಗಣದಲ್ಲಿ ಐದು ಪಂದ್ಯಗಳು ನಡೆಯಲಿವೆ. ಆದರೆ ಮೊಹಾಲಿಗೆ ಒಂದೇ ಒಂದು ಪಂದ್ಯವೂ ಇಲ್ಲ. ಇದು ರಾಜಕೀಯ ಹುನ್ನಾರ‘ ಎಂದು ಅವರು ಕಿಡಿಕಾರಿದ್ದಾರೆ.

ಅಹಮದಾಬಾದ್ ಕ್ರೀಡಾಂಗಣದಲ್ಲ ಕಳೆದ ಎರಡು ಆವೃತ್ತಿಗಳ ಐಪಿಎಲ್ ಫೈನಲ್ಗಳನ್ನೂ ಆಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.