ವಿವರಣೆ ನೀಡಿದ ಸೌರವ್‌ ಗಂಗೂಲಿ

ಸೋಮವಾರ, ಮೇ 20, 2019
30 °C
ಹಿತಾಸಕ್ತಿ ಸಂಘರ್ಷದ ಆರೋಪ: ತೀರ್ಪು ಕಾಯ್ದಿರಿಸಿದ ಡಿ.ಕೆ. ಜೈನ್‌

ವಿವರಣೆ ನೀಡಿದ ಸೌರವ್‌ ಗಂಗೂಲಿ

Published:
Updated:
Prajavani

ನವದೆಹಲಿ: ಸೌರವ್‌ ಗಂಗೂಲಿ ವಿರುದ್ಧದ ಹಿತಾಸಕ್ತಿ ಸಂಘರ್ಷ ಆರೋಪದ ಕುರಿತು ಬಿಸಿಸಿಐ ಒಂಬುಡ್ಸ್‌ಮನ್‌ ಡಿ.ಕೆ.ಜೈನ್ ಅವರು ತೀರ್ಪನ್ನು ಕಾಯ್ದಿರಿಸಿದ್ದಾರೆ. 

ಶುಕ್ರವಾರ ನಡೆದ ವಿಚಾರಣೆಗೆ ಹಾಜರಾಗಿದ್ದ ದೂರುದಾರರು ಮತ್ತು ಗಂಗೂಲಿ ಅವರಿಂದ ವಿವರಣೆ ಆಲಿಸಿದ ಜೈನ್‌, ಇಬ್ಬರಿಂದಲೂ ಲಿಖಿತ ವಿವರಣೆ ಕೇಳಿದ್ದಾರೆ.

‘ತೀರ್ಪನ್ನು ಪ್ರಕಟಿಸುವ ಮುಂಚೆ ವಿವರಣೆ ಪಡೆದಿದ್ದೇನೆ. ಆದರೆ, ಇಬ್ಬರೂ ಲಿಖಿತ ವಿವರಣೆ ಸಲ್ಲಿಸಬೇಕು. ಸೂಕ್ತ ಸಂದರ್ಭದಲ್ಲಿ ನಿರ್ಧಾರ ಹೊರಬರಲಿದೆ’ ಎಂದು ಬಿಸಿಸಿಐ ನೀತಿ ಸಮಿತಿ ಮುಖ್ಯಸ್ಥರೂ ಆಗಿರುವ ಡಿ.ಕೆ.ಜೈನ್‌ ಹೇಳಿದ್ದಾರೆ. 

ಕೋಲ್ಕತ್ತದ ರಂಜೀತ್‌ ಸೀಲ್‌, ಅಭಿಜಿತ್‌ ಮುಖರ್ಜಿ ಮತ್ತು ಭಾಸ್ವತಿ ಶಾಂತುವ ಅವರು, ‘ಸೌರವ್‌ ಗಂಗೂಲಿ, ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ) ಅಧ್ಯಕ್ಷ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗಿರುವ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೂರು ನೀಡಿದ್ದರು.

ಗಂಗೂಲಿ ಬೆಂಬಲಕ್ಕೆ ಬಿಸಿಸಿಐ: ಹಿತಾಸಕ್ತಿ ಸಂಘರ್ಷ ಆರೋಪ ವಿವಾದದಲ್ಲಿ ಸೌರವ್ ಗಂಗೂಲಿ ಬೆಂಬಲಕ್ಕೆ ಬಿಸಿಸಿಐ ನಿಂತಿದೆ.

ಒಂಬುಡ್ಸ್‌ಮನ್‌ ಜೈನ್‌ ಅವ ರೊಂದಿಗೆ ಚರ್ಚಿಸಿ ಪ್ರಕರಣವನ್ನು ಶೀಘ್ರವೇ ಇತ್ಯರ್ಥಗೊಳಿಸುವ ಭರವಸೆ ವ್ಯಕ್ತಪಡಿಸಿದೆ. 38 (3a) ನಿಯಮಾವಳಿ ಅಡಿ ಇದು ಸುಲಭವಾಗಿ ನಿರ್ವಹಿಸಬಹುದಾದ ಪ್ರಕರಣ ಎಂದು ಹೇಳಿದೆ.    

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !