ಸೋಮವಾರ, ಸೆಪ್ಟೆಂಬರ್ 26, 2022
22 °C

ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ: ರಹಾನೆ, ಜೈಸ್ವಾಲ್‌ ದ್ವಿಶತಕ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ : ಅಜಿಂಕ್ಯ ರಹಾನೆ (ಬ್ಯಾಟಿಂಗ್‌ 207) ಮತ್ತು ಯಶಸ್ವಿ ಜೈಸ್ವಾಲ್‌ (228) ಅವರ ಭರ್ಜರಿ ದ್ವಿಶತಕ ನೆರವಿನಿಂದ ಪಶ್ಚಿಮ ವಲಯ ತಂಡ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಈಶಾನ್ಯ ವಲಯದ ವಿರುದ್ಧ ಬೃಹತ್‌ ಮೊತ್ತ ಕಲೆಹಾಕಿದೆ.

ಚೆನ್ನೈನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರದ ಆಟದ ಅಂತ್ಯಕ್ಕೆ ಪಶ್ಚಿಮ ವಲಯ ಮೊದಲ ಇನಿಂಗ್ಸ್‌ನಲ್ಲಿ 2ಕ್ಕೆ 590 ರನ್‌ ಗಳಿಸಿದೆ. ರಹಾನೆ ಮತ್ತು ಜೈಸ್ವಾಲ್‌ ಎರಡನೇ ವಿಕೆಟ್‌ಗೆ 333 ರನ್‌ ಸೇರಿಸಿದರು.

ಪುದುಚೇರಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪೂರ್ವ ವಲಯ ತಂಡ ಉತ್ತರ ವಲಯ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 397 ರನ್‌ ಪೇರಿಸಿದೆ. ವಿರಾಟ್‌ ಸಿಂಗ್‌ (117) ಶತಕ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಪಶ್ಚಿಮ ವಲಯ 123 ಓವರ್‌ಗಳಲ್ಲಿ 2ಕ್ಕೆ 590 (ಪೃಥ್ವಿ ಶಾ 113, ಯಶಸ್ವಿ ಜೈಸ್ವಾಲ್ 228, ಅಜಿಂಕ್ಯ ರಹಾನೆ ಬ್ಯಾಟಿಂಗ್‌ 207, ರಾಹುಲ್‌ ತ್ರಿಪಾಠಿ ಬ್ಯಾಟಿಂಗ್‌ 25)

ಪುದುಚೇರಿ ಪಂದ್ಯ: ಮೊದಲ ಇನಿಂಗ್ಸ್‌: ಪೂರ್ವ ವಲಯ 136.4 ಓವರ್‌ಗಳಲ್ಲಿ 397 (ವಿರಾಟ್‌ ಸಿಂಗ್‌ 117, ಶಹಬಾಜ್‌ ಅಹ್ಮದ್‌ 62, ನವದೀಪ್‌ ಸೈನಿ 83ಕ್ಕೆ 3) ಉತ್ತರ ವಲಯ 13 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 65

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು