ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಲೇಡ್‌ನಿಂದ ಸೌತ್‌ವೇಲ್ಸ್‌ಗೆ ವಿಮಾನದಲ್ಲಿ ಕ್ರಿಕೆಟಿಗರ ಸ್ಥಳಾಂತರ

Last Updated 17 ನವೆಂಬರ್ 2020, 15:00 IST
ಅಕ್ಷರ ಗಾತ್ರ

ಸಿಡ್ನಿ; ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಟಿಮ್ ಪೇನ್ ಮತ್ತು ಬ್ಯಾಟ್ಸ್‌ಮನ್ ಮಾರ್ನಸ್ ಲಾಬುಶೇನ್ ಸೇರಿದಂತೆ ಆಸ್ಟ್ರೇಲಿಯಾದ ಕೆಲವು ಆಟಗಾರರನ್ನು ಅಡಿಲೇಡ್‌ನಿಂದ ನ್ಯೂಸೌತ್‌ವೇಲ್ಸ್‌ಗೆ ವಿಮಾನದಲ್ಲಿ ಸೋಮವಾರ ಸ್ಥಳಾಂತರಿಸಲಾಯಿತು.

ಅಡಿಲೇಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವುದರಿಂದ ಇಲ್ಲಿ ನೆಲೆಸಿದ್ದ ಕ್ರಿಕೆಟಿಗರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಕ್ರಮ ಕೈಗೊಂಡಿದೆ.

ಭಾರತದ ಎದುರಿನ ಸರಣಿಗಳಿಗೆ ಯಾವುದೇ ಅಡೆತಡೆಯುಂಟಾಗದಂತೆ ನೋಡಿಕೊಳ್ಳಲು ಈ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. /// ವಹಿವಾಟು ತರಲಿರುವ ಈ ಸರಣಿಯನ್ನು ಸುಸೂತ್ರವಾಗಿ ನಡೆಸುವತ್ತ ಚಿತ್ತ ಹರಿಸಿದೆ.

’ಕಳೆದ 24 ಗಂಟೆಗಳಲ್ಲಿ ದೇಶದ ಬೇರೆ ಬೇರೆ ಭಾಗಗಳಲ್ಲಿ ರಾಷ್ಟ್ರೀಯ ಮತ್ತು ದೇಶಿ ವೇಳಾಪಟ್ಟಿಯ ಅನುಗುಣವಾಗಿ ಆಟಗಾರರ ಸುರಕ್ಷತೆಯನ್ನು ನೋಡಿಕೊಳ್ಳುವುದು ಮುಖ್ಯ. ಅದಕ್ಕಾಗಿ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಂಡಿ್ದ್ದೇವೆ‘ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ನಿಕ್ ಹಾಕ್ಲೆ ತಿಳಿಸಿದ್ದಾರೆ.

ಪೇನ್, ಲಾಬುಶೇನ್ ಜೊತೆಗೆ ಮ್ಯಾಥ್ಯೂ ವೇಡ್, ಟ್ರಾವಿಸ್ ಹೆಡ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನೂ ಸ್ಥಳಾಂತರ ಮಾಡಲಾಗಿದೆ.

ಅಡಿಲೇಡ್ ಓವಲ್‌ನಲ್ಲಿ ಡಿಸೆಂಬರ್‌ 17ರಂದು ಭಾರತ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪ್ರದೇಶದಲ್ಲಿ ಕೋವಿಡ್ –19 ಪ್ರಕರಣಗಳು ಹೆಚ್ಚುತ್ತಿವೆ.

’ದಕ್ಷಿಣ ಆಸ್ಟ್ರೇಲಿಯಾದ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ. ಪ್ರಾಂತ್ಯಗಳ ಗಡಿ, ಪ್ರಯಾಣ ನಿರ್ಬಂಧಗಳ ಕುರಿತು ಸರ್ಕಾರ ಕೈಗೊಳ್ಳುವ ಕ್ರಮಗಳ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದೇವೆ. ಅದಕ್ಕೆ ತಕ್ಕಂತೆ ಯೋಜನೆ ಮಾಡುತ್ತೇವೆ. ಹಲವಾರು ಸಂಘಟನೆಗಳು ನಮ್ಮ ನೆರವಿಗೆ ನಿಂತಿವೆ. ಅವುಗಳಿಗೆ ನಾವು ಕೃತಜ್ಞರಾಗಿದ್ದೇವೆ. ಕಳೆದ 48 ಗಂಟೆಗಳಲ್ಲಿ ಅವರೆಲ್ಲರ ನೆರವಿನಿಂದ ಆಟಗಾರರನ್ನು ಸುರಕ್ಷಿತ ಜಾಗಗಳಿಗೆ ತಲುಪಿಸುತ್ತಿದ್ದೇವೆ‘ ಎಂದು ನಿಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT