ಶುಕ್ರವಾರ, ಜುಲೈ 1, 2022
27 °C
ಮಿಚೆಲ್ ಸ್ಟಾರ್ಕ್‌, ಪ್ಯಾಟ್ ಕಮಿನ್ಸ್ ಜೋಡಿಯ ಅಮೋಘ ವೇಗದ ದಾಳಿ

Pak vs Aus Test: ಪಾಕಿಸ್ತಾನ ತತ್ತರ, ಆಸ್ಟ್ರೇಲಿಯಾಗೆ ಮುನ್ನಡೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಾಹೋರ್: ವೇಗದ ದಾಳಿಯ ಮೂಲಕ ಮಧ್ಯಮ ಮತ್ತು ಕೆಳಕ್ರಮಾಂಕವನ್ನು ದೂಳೀಪಟ ಮಾಡಿದ ಆಸ್ಟ್ರೇಲಿಯಾ ತಂಡ ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ಎದುರಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮುನ್ನಡೆ ಸಾಧಿಸಿದೆ.

ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಮೊತ್ತವಾದ 391 ರನ್‌ಗಳಿಗೆ ಉತ್ತರಿಸಿದ ಪಾಕಿಸ್ತಾನ 268 ರನ್‌ಗಳಿಗೆ ಪತನ ಕಂಡಿತು. ಮೂರನೇ ದಿನದಾಟದ ಮುಕ್ತಾಯದ ವೇಳೆ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ಕಳೆದುಕೊಳ್ಳದೆ 11 ರನ್ ಗಳಿಸಿದ್ದು ಒಟ್ಟಾರೆ 134 ರನ್‌ಗಳ ಮುನ್ನಡೆಯಲ್ಲಿದೆ.

ಎರಡನೇ ದಿನದಾಟದ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಂಡು 90 ರನ್‌ ಗಳಿಸಿದ್ದ ಪಾಕಿಸ್ತಾನ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಬುಧವಾರ ಪ್ರವಾಸಿ ತಂಡದ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ ತತ್ತರಿಸಿತು. ತಂಡದ ಕೊನೆಯ 9 ವಿಕೆಟ್‌ಗಳು ಕೇವಲ 98 ರನ್‌ಗಳಿಗೆ ಉರುಳಿದ್ದವು.

ಮಂಗಳವಾರ ಕ್ರಮವಾಗಿ 45 ಮತ್ತು 30 ರನ್ ಗಳಿಸಿ ಅಜೇಯರಾಗಿದ್ದ ಅಬ್ದುಲ್ಲ ಶಫೀಕ್ ಮತ್ತು ಅಜರ್ ಅಲಿ ಬುಧವಾರ ಬೆಳಿಗ್ಗೆ ಅಮೋಘ ಬ್ಯಾಟಿಂಗ್ ಮಾಡಿ ಭರವಸೆ ಮೂಡಿಸಿದರು. ಬಾಬರ್ ಆಜಂ ಕೂಡ ಅರ್ಧಶತಕ ಗಳಿಸಿ ಮಿಂಚಿದರು. ಈ ಮೂವರು ಔಟಾದ ನಂತರ ಯಾರಿಗೂ ಕ್ರೀಸ್‌ನಲ್ಲಿ ತಳವೂರಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ: 391; ಪಾಕಿಸ್ತಾನ (ಮಂಗಳವಾರ 39 ಓವರ್‌ಗಳಲ್ಲಿ 1 ವಿಕೆಟ್‌ಗೆ 90): 116.4 ಓವರ್‌ಗಳಲ್ಲಿ 268 (ಅಬ್ದುಲ್ಲ ಶಫೀಕ್‌ 81, ಅಜರ್ ಅಲಿ 78, ಬಾಬರ್ ಆಜಂ 67; ಮಿಚೆಲ್ ಸ್ಟಾರ್‌ 33ಕ್ಕೆ4, ಪ್ಯಾಟ್ ಕಮಿನ್ಸ್ 56ಕ್ಕೆ5, ನೇಥನ್ ಲಯನ್ 95ಕ್ಕೆ1); ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 3 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 11 (ಉಸ್ಮಾನ್ ಖ್ವಾಜಾ 7, ಡೇವಿಡ್ ವಾರ್ನರ್ 4).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು