ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್: ಪಾಕ್‌ ಆಯ್ಕೆಗಾರರ ಸ್ಥಾನದಿಂದ ವಹಾಬ್, ರಝಾಕ್‌ ವಜಾ

Published 10 ಜುಲೈ 2024, 13:28 IST
Last Updated 10 ಜುಲೈ 2024, 13:28 IST
ಅಕ್ಷರ ಗಾತ್ರ

ಲಾಹೋರ್: ಕಳೆದ ತಿಂಗಳು ಅಮೆರಿಕ– ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಕಳಪೆ ಆಟ ತೋರಿದ್ದರಿಂದ ದೇಶದ ಕ್ರಿಕೆಟ್ ಮಂಡಳಿಯು ಆಯ್ಕೆಗಾರರಾದ ವಹಾಬ್ ರಿಯಾಜ್‌ ಮತ್ತು ಅಬ್ದುಲ್‌ ರಝಾಕ್ ಅವರನ್ನು ವಜಾ ಮಾಡಿದೆ.

ಇವರಿಬ್ಬರೂ ಮಾಜಿ ಅಂತರರಾಷ್ಟ್ರೀಯ ಆಟಗಾರರು.

ವಹಾಬ್ ಮತ್ತು ರಝಾಕ್ ಅವರು ಆಯ್ಕೆಗಾರರ ಸಮಿತಿಯ ಭಾಗವಾಗಿದ್ದರು. ಈ ಸಮಿತಿಗೆ ಅಧ್ಯಕ್ಷ ಇರಲಿಲ್ಲ. ಸಮಿತಿಯಲ್ಲಿ ಇವರಿಬ್ಬರ ಜೊತೆ ತಂಡದ ನಾಯಕ, ಹೆಡ್‌ ಕೋಚ್ ಮತ್ತು ಡೇಟಾ ಅನಲಿಸ್ಟ್‌ ಒಳಗೊಂಡಿದ್ದರು.

ಕಳೆದ ನವೆಂಬರ್‌ನಲ್ಲಿ ಇವರಿಬ್ಬರನ್ನು ಆಯ್ಕೆ ಮಾಡಲಾಗಿತ್ತು. ರಝಾಕ್ ಅವರು ಇತ್ತೀಚಿನ ವಿಶ್ವಕಪ್‌ನಲ್ಲಿ ಮ್ಯಾನೇಜರ್ ಪಾತ್ರವನ್ನೂ ನಿಭಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT