ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನಿಂತರೂ ಪಾಕಿಸ್ತಾನ–ಶ್ರೀಲಂಕಾ ಪಂದ್ಯ ರದ್ದು

ವಿಶ್ವಕಪ್‌ ಕ್ರಿಕೆಟ್‌
Last Updated 7 ಜೂನ್ 2019, 16:05 IST
ಅಕ್ಷರ ಗಾತ್ರ

ಬ್ರಿಸ್ಟಲ್:ಜೋರು ಮಳೆಯ ಕಾರಣದಿಂದ ಪಾಕಿಸ್ತಾನ–ಶ್ರೀಲಂಕಾ ನಡುವಿನ ಪಂದ್ಯದ ಆರಂಭ ಮುಂದೂಡಲಾಗಿತ್ತು. ಅಭಿಮಾನಿಗಳೂ ಸಹ ಮಳೆ ನಿಲ್ಲುವುದನ್ನು ಕಾಯುತ್ತಿದ್ದರು. ಮಳೆ ನಿಂತಿತಾದರೂ ಅಂಪೈರ್‌ಗಳು ಪಂದ್ಯ ರದ್ದು ಪಡಿಸುವ ನಿರ್ಧಾರ ಕೈಗೊಂಡರು.

ಮೈದಾನ ಪರಿಶೀಲಿಸಿದ ಅಂಪೈರ್‌ಗಳು, ಅಲ್ಲಿತೇವಾಂಶ ಹೆಚ್ಚಿರುವ ಕಾರಣ ಪಂದ್ಯ ಆರಂಭಿಸಲು ಅಸಮ್ಮತಿ ಸೂಚಿಸಿದರು. ಇದರಿಂದಾಗಿ ಉಭಯ ತಂಡಗಳು ಒಂದೊಂದು ಅಂಕಹಂಚಿಕೊಂಡಿವೆ.

ಶ್ರೀಲಂಕಾ ಮಂಗಳವಾರ ಬಾಂಗ್ಲಾದೇಶದ ವಿರುದ್ಧ ಸೆಣಸಲಿದೆ. ಪಾಕಿಸ್ತಾನ ತಂಡವು ಬುಧವಾರ ಆಸ್ಟ್ರೇಲಿಯಾ ಎದುರು ಕಣಕ್ಕಿಳಿಯಲಿದೆ.

ಪಂದ್ಯದ ಆರಂಭವನ್ನು ಎದುರು ನೋಡುತ್ತಿದ್ದ ಅಭಿಮಾನಿಗಳಲ್ಲಿ ಮಳೆಯ ನಡುವೆಯೂಸಂಭ್ರಮ ಕಡಿಮೆಯಾಗಲಿಲ್ಲ.

ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3ಕ್ಕೆ ಪಂದ್ಯ ಆರಂಭವಾಗಬೇಕಿತ್ತು. ಮೈದಾನದ ಮೇಲಿನ ಆಗಸ ದಟ್ಟ ಮೋಡಗಳಿಂದ ಆವೃತವಾಗಿ ಜೋರು ಮಳೆಯೂ ಸುರಿಯಿತು. ಇದರಿಂದಾಗಿ ಪಂದ್ಯದ ಆರಂಭ ಅನಿವಾರ್ಯವಾಗಿ ಮುಂದೂಡಲಾಯಿತು. ರಾತ್ರಿ 7:45ಕ್ಕೆ ಅಂಪೈರ್‌ಗಳು ಪಿಚ್‌ ಪರಿಶೀಲನೆ ನಡೆಸಿ ಪಂದ್ಯ ರದ್ದು ಮಾಡುವ ನಿರ್ಧಾರ ಕೈಗೊಂಡರು.

ಎರಡೂ ರಾಷ್ಟ್ರಗಳು ಮೊದಲ ಪಂದ್ಯಗಳಲ್ಲಿ ಸೋಲಿನ ಕಹಿ ನಂತರ ಪುಟಿದ್ದೆದ್ದು ಗೆಲುವು ಸಾಧಿಸಿದವು. ಹುಮ್ಮಸ್ಸಿನಲ್ಲಿರುವ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿತ್ತು.

ಶ್ರೀಲಂಕಾ ತಂಡ ಪಾಕಿಸ್ತಾನದ ಎದುರು ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಏಳು ಪಂದ್ಯಗಳಲ್ಲಿ ಒಂದರಲ್ಲಿಯೂ ಗೆಲುವು ಪಡೆದಿಲ್ಲ.

ಆತಿಥೇಯ ಇಂಗ್ಲೆಂಡ್‌ ತಂಡದ ವಿರುದ್ಧ ಗೆಲುವು ಸಾಧಿಸುವುದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ಎದುರು ಪಾಕಿಸ್ತಾನ ಸೋಲು ಕಂಡಿತ್ತು. ಶ್ರೀಲಂಕಾ ಅಫ್ಗಾನಿಸ್ತಾನದ ವಿರುದ್ಧ ಗೆಲುವು ಪಡೆಯುವುದಕ್ಕೂ ಮುನ್ನ ನ್ಯೂಜಿಲೆಂಡ್‌ ಎದುರು ಸೋತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT