ಮುಲ್ಲನಪುರ: ಬೆರಳಿನ ಮೂಳೆಮುರಿತದಿಂದ ಐಪಿಎಲ್ನಿಂದ ಹೊರಬಿದ್ದಿರುವ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರ ಸ್ಥಾನಕ್ಕೆ ಪಂಜಾಬ್ ಕಿಂಗ್ಸ್ ತಂಡವು, ಆಸ್ಟ್ರೇಲಿಯಾದ ಇನ್ನೊಬ್ಬ ಆಲ್ರೌಂಡರ್ ಮಿಚ್ ಒವೆನ್ ಅವರನ್ನು ಸೇರ್ಪಡೆ ಮಾಡಿಕೊಂಡಿದೆ.

ಮ್ಯಾಕ್ಸ್ವೆಲ್ ಈ ಬಾರಿ ದಯನೀಯವಾಗಿ ವಿಫಲರಾಗಿದ್ದರು. ಏಳು ಇನಿಂಗ್ಸ್ಗಳಲ್ಲಿ ಬರೇ 48 ರನ್ ಗಳಿಸಿದ್ದರು. ಇದರಲ್ಲಿ ಆರು ಬಾರಿ ಒಂದಂಕಿ ಮೊತ್ತಕ್ಕೆ ನಿರ್ಗಮಿಸಿದ್ದರು.

ಕೋಲ್ಕತ್ತ ನೈಟ್ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಗಾಯಾಳಾಗಿದ್ದರು. ಸಿಎಸ್ಕೆ ವಿರುದ್ಧ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಸ್ಥಾನದಲ್ಲಿ ಸೂರ್ಯಾಂಶ್ ಶೆಡ್ಗೆ ಆಡಿದ್ದರು.

ತಾಸ್ಮೇನಿಯಾದ 23 ವರ್ಷ ವಯಸ್ಸಿನ ಒವೆನ್ ಬಲಗೈ ಬ್ಯಾಟರ್ ಮತ್ತು ಬಲಗೈ ವೇಗಿಯಾಗಿದ್ದು 14 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 34 ಟಿ20 ಪಂದ್ಯಗಳಲ್ಲಿ ಎರಡು ಶತಕ ಸೇರಿದಂತೆ 646 ರನ್ ಗಳಿಸಿದ್ದಾರೆ. 108 ಅತ್ಯಧಿಕ. 10 ವಿಕೆಟ್ಗಳನ್ನು ಪಡೆದಿದ್ದಾರೆ.

ಅವರು ₹3 ಕೋಟಿ ಮೊತ್ತಕ್ಕೆ ಶ್ರೇಯಸ್ ಅಯ್ಯರ್ ಬಳಗ ಸೇರಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.