ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆವಿನ್ ಪೀಟರ್ಸನ್‌ಗೂ ಪತ್ರ ಬರೆದ ಪ್ರಧಾನಿ ಮೋದಿ

Last Updated 28 ಜನವರಿ 2022, 14:07 IST
ಅಕ್ಷರ ಗಾತ್ರ

ಲಂಡನ್: ಗಣರಾಜ್ಯೋತ್ಸವದ ಸಂಭ್ರಮ ಹಂಚಿಕೊಳ್ಳಲುಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂಗ್ಲೆಂಡ್‌ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರಿಗೂ ಪತ್ರ ಬರೆದಿದ್ದಾರೆ. ಪೀಟರ್ಸನ್ ಶುಕ್ರವಾರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

‘ಭಾರತದ ಗೆಳೆಯರು’ ಎಂದು ಬಣ್ಣಿಸಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಮತ್ತು ವೆಸ್ಟ್ ಇಂಡೀಸ್‌ನ ಬ್ಯಾಟರ್ ಕ್ರಿಸ್ ಗೇಲ್ ಅವರಿಗೆ ಮೋದಿ ಪತ್ರ ಬರೆದಿದ್ದರು. ಅದಕ್ಕೆ ಗಣರಾಜ್ಯೋತ್ಸವದಂದೇ ಇಬ್ಬರೂ ಕೃತಜ್ಞತೆ ಸಲ್ಲಿಸಿದ್ದರು.

ಟ್ವೀಟ್ ಮಾಡಿರುವ ಪೀಟರ್ಸನ್ ‘ನೂರು ಕೋಟಿಗೂ ಮೀರಿದ ಜನಸಂಖ್ಯೆ ಇರುವ ಭಾರತ ಜಾಗತಿಕ ಶಕ್ತಿಯಾಗಿ ಬೆಳೆದಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘2003ರಲ್ಲಿ ಭಾರತಕ್ಕೆ ಕಾಲಿಟ್ಟ ನಂತರ ಪ್ರತಿಯೊಂದು ಭೇಟಿಯಲ್ಲೂ ನಿಮ್ಮ ದೇಶದ ಮೇಲಿನ ಅಭಿಮಾನ, ಪ್ರೀತಿ ಹೆಚ್ಚುತ್ತ ಸಾಗಿದೆ’ ಎಂದು ಅವರು ಹೇಳಿದ್ದಾರೆ.

ಜಾಂಟಿ ರೋಡ್ಸ್ ಮತ್ತು ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್‌ ಅವರಿಗೆ ಪತ್ರ ಬರೆದಿದ್ದ ಮೋದಿ ಭಾರತದೊಂದಿಗೆ ‘ಉತ್ತಮ ಸಂಬಂಧ’ ಬೆಳೆಸಿಕೊಂಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದರು.

ಫೀಲ್ಡಿಂಗ್‌ನಲ್ಲಿ ಅದ್ಭುತ ಸಾಮರ್ಥ್ಯ ತೋರಿದ್ದ ಜಾಂಟಿ ರೋಡ್ಸ್ ಅವರು ಮುಂಬೈ ಇಂಡಿಯನ್ಸ್‌ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಭಾರತದಲ್ಲಿ ತಾತ್ಕಾಲಿಕವಾಗಿ ಉಳಿ ದುಕೊಂಡಿರುವ ಅವರು ತಮ್ಮ ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟಿದ್ದಾರೆ. ಸ್ಫೋಟಕ ಶೈಲಿಯ ಬ್ಯಾಟರ್ ಕ್ರಿಸ್ ಗೇಲ್‌ ಅವರು ಐಪಿ ಎಲ್‌ನಲ್ಲಿ ಭರ್ಜರಿ ಹೊಡೆತಗಳ ಮೂಲಕ ಭಾರತದ ಕ್ರಿಕೆಟ್ ಪ್ರಿಯರ ಮನ ಗೆದ್ದಿದ್ದಾರೆ.ಜಾಂಟಿ ರೋಡ್ಸ್ ಅವರಿಗೆ ಬರೆದಿರುವ ಪತ್ರದಲ್ಲಿ ‘ನಿಮಗೆ ಗಣರಾಜ್ಯೋತ್ಸವದ ಶುಭಕಾಮನೆಗಳು. ಕೆಲವು ವರ್ಷಗಳಿಂದ ನೀವು ಭಾರತದ ಜೊತೆ ಬಾಂಧವ್ಯ ಹೊಂದಿದ್ದು ಇಲ್ಲಿನ ಸಂಸ್ಕೃತಿಯನ್ನು ಮೆಚ್ಚಿಕೊಂಡಿರುವುದು ಸಂತೋಷದ ವಿಷಯ. ಮಗಳಿಗೆ ನಮ್ಮ ದೇಶದ ಹೆಸರನ್ನೇ ಇರಿಸಿರುವ ದೊಡ್ಡ ವ್ಯಕ್ತಿತ್ವ ನಿಮ್ಮದು. ಎರಡು ದೇಶಗಳ ನಡುವಿನ ನೈಜ ರಾಯಭಾರಿ ನೀವು’ ಎಂದು ಮೋದಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT