ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಟೂರ್ನಿಯಲ್ಲಿ ದೊಡ್ಡ ಮೊತ್ತ ಅನುಮಾನ: ಡೇವಿಡ್ ಮಿಲ್ಲರ್

Published 23 ಏಪ್ರಿಲ್ 2024, 14:18 IST
Last Updated 23 ಏಪ್ರಿಲ್ 2024, 14:18 IST
ಅಕ್ಷರ ಗಾತ್ರ

ನವದೆಹಲಿ: ಮುಂಬರಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳು ನಡೆಯಲಿರುವ ಪಿಚ್‌ಗಳು ನಿಧಾನಗತಿಯ ಬೌಲಿಂಗ್‌ಗೆ ನೆರವಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ದೊಡ್ಡ ಮೊತ್ತಗಳನ್ನು ನಿರೀಕ್ಷಿಸಲಾಗದು ಎಂದು ದಕ್ಷಿಣ ಆಫ್ರಿಕಾ ಆಟಗಾರ ಡೇವಿಡ್ ಮಿಲ್ಲರ್ ಅಭಿಪ್ರಾಯಪಟ್ಟಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ  ಜೂನ್ 2ರಿಂದ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. 

ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದಲ್ಲಿ ಆಡುತ್ತಿರುವ ಮಿಲ್ಲರ್  ಸುದ್ದಿಗಾರರೊಂದಿಗೆ ಮಾತನಾಡಿದರು. 

‘ಇಲ್ಲಿಯಂತೆ (ಐಪಿಎಲ್) ಟಿ20 ವಿಶ್ವಕಪ್ ಟೂರ್ನಿಯಲ್ಲಿ ದೊಡ್ಡ ಮೊತ್ತಗಳು ದಾಖಲಾಗುತ್ತವೆ ಎಂದು ಹೇಳಲಾಗದು. ಏಕೆಂದರೆ ಅಲ್ಲಿಯೆ ವಾತಾವರಣ, ಸ್ಥಿತಿ ಗತಿ ಬೇರೆಯೇ ಇವೆ. ಕೆರಿಬಿಯನ್ ಪಿಚ್‌ಗಳು ನಿಧಾನಗತಿಯ ಎಸೆತಗಳಿಗೆ ನೆರವಾಗುವ ಸಾಧ್ಯತೆ ಇದೆ. ಆಡುವ ದಿನವೇ ಪಿಚ್‌ಗಳ ಅಂದಾಜು ಸಿಗಬಹುದು’ ಎಂದರು. 

ಐಪಿಎಲ್‌ನಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಪ್ರತಿಕ್ರಿಯಿಸಿದ ಮಿಲ್ಲರ್, ‘ಎಲ್ಲರೂ ತಮ್ಮ ಅಭಿಪ್ರಾಯ ಹೇಳಲು ಸ್ವತಂತ್ರರು. ನಾನು ಕೂಡ ಈ ನಿಯಮದ ಅಭಿಮಾನಿ ಅಲ್ಲ. ರೋಹಿತ್ (ಶರ್ಮಾ) ಈ ನಿಯಮವು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಒಗ್ಗುವಂತದಲ್ಲ ಎಂಬ ಧಾಟಿಯಲ್ಲಿ ಹೇಳಿದ್ಧಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳು ಈಗ ಇರುವಂತೆಯೇ ಇರಲಿ. ಬದಲಾವಣೆ ಬೇಡ. ಇಂಪ್ಯಾಕ್ಟ್ ನಿಯಮವು ತಂಡದಲ್ಲಿ ಆರು ಬೌಲರ್ ಮತ್ತು ಎಂಟು ಬ್ಯಾಟರ್‌ಗಳನ್ನು ಆಡಿಸುವಂತೆ ಮಾಡಿದೆ. ಇದರಿಂದಾಗಿ ಆಲ್‌ರೌಂಡರ್‌ಗಳು ಚಿತ್ರಣದಲ್ಲಿಯೇ ಇಲ್ಲ. ನಿಯಮದ ಪ್ರಕಾರ ಆಡುವುದು ನಮ್ಮ ಕೆಲಸ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT