ಭಾರತ–ವೆಸ್ಟ್‌ ಇಂಡೀಸ್ ಏಕದಿನ ಕ್ರಿಕೆಟ್: ಪದಾರ್ಪಣೆಯ ನಿರೀಕ್ಷೆಯಲ್ಲಿ ರಿಷಭ್ ಪಂತ್

7
ಗುವಾಹಟಿಯಲ್ಲಿ ಹಣಾಹಣಿ

ಭಾರತ–ವೆಸ್ಟ್‌ ಇಂಡೀಸ್ ಏಕದಿನ ಕ್ರಿಕೆಟ್: ಪದಾರ್ಪಣೆಯ ನಿರೀಕ್ಷೆಯಲ್ಲಿ ರಿಷಭ್ ಪಂತ್

Published:
Updated:
Deccan Herald

ಗುವಾಹಟಿ: ವೆಸ್ಟ್‌ ಇಂಡೀಸ್ ಎದುರು ಟೆಸ್ಟ್‌ ಸರಣಿಯಲ್ಲಿ ಅಧಿ ಕಾರಯುತ ಗೆಲುವು ಸಾಧಿಸಿದ ನಂತರ ಈಗ ಏಕದಿನ ಸರಣಿಯಲ್ಲಿ ಪಾರುಪತ್ಯ ಸಾಧಿಸುವ ಛಲದಲ್ಲಿ ವಿರಾಟ್ ಕೊಹ್ಲಿ ಬಳಗವಿದೆ. 

ಮುಂದಿನ ತಿಂಗಳು ಆಸ್ಟ್ರೇಲಿಯಾ ಪ್ರವಾಸ ಮತ್ತು ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ತಂಡವನ್ನು ಸಿದ್ಧಗೊಳಿಸಲು ಈ ಸರಣಿ ಪ್ರಯೋಗಗಳ ವೇದಿಕೆಯಾಗಲಿದೆ.

ಒಟ್ಟು ಐದು ಪಂದ್ಯಗಳು ಸರಣಿ ಯಲ್ಲಿ ನಡೆಯಲಿವೆ. ಮೊದಲ ಪಂದ್ಯ ಕ್ಕಾಗಿ ಇಲ್ಲಿನ ಬರ್ಸಾಪರ ಕ್ರೀಡಾಂಗಣ ಸಿದ್ಧವಾಗಿದೆ.

ಅದಕ್ಕಾಗಿಯೇ ದೆಹಲಿಯ ಆಟಗಾರ ರಿಷಭ್ ಪಂತ್ ಅವರಿಗೆ ಏಕದಿನ ಕ್ರಿಕೆಟ್‌ನಲ್ಲಿ ಪದಾರ್ಪಣೆಯ ಅವಕಾಶ ಸಿಗುವ ಎಲ್ಲ ಸಾಧ್ಯತೆಗಳೂ ಇವೆ. ‌‌ಆದರೆ ಮಹೇಂದ್ರಸಿಂಗ್ ಧೋನಿಯವರೇ ವಿಕೆಟ್‌ ಕೀಪಿಂಗ್ ನಿರ್ವಹಿಸಲಿದ್ದಾರೆ. ಇದರಿಂದಾಗಿ ರಿಷಭ್ ಆರು ಆಥವಾ ಏಳನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಹೋದ ತಿಂಗಳು ಏಷ್ಯಾಕಪ್ ಟೂರ್ನಿಯಲ್ಲಿ ಮಿಂಚಿದ್ದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರು ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ. ಅದರಿಂದಾಗಿ ಕೆ.ಎಲ್. ರಾಹುಲ್ ಅವರಿಗೆ ಹನ್ನೊಂದರಲ್ಲಿ ಸ್ಥಾನ ಸಿಗುವುದು ಅನುಮಾನ.

ಮೂರನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ, ನಾಲ್ಕರಲ್ಲಿ ಅಂಬಟಿ ರಾಯುಡು, ನಂತರ ಧೋನಿ ಅವರು ಕಣಕ್ಕಿಳಿಯಬಹುದು. ರಾಯುಡುಗೆ ಅವಕಾಶ ಸಿಗದಿದ್ದರೆ ಮನೀಷ್ ಪಾಂಡೆ ಆಡಬಹುದು.

ಬೌಲಿಂಗ್‌ ವಿಭಾಗದಲ್ಲಿ ಉಮೇಶ್ ಯಾದವ್‌, ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ವೇಗದ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಯುವ ಆಟಗಾರ ಖಲೀಲ್‌ ಅಹಮದ್ ಅವರಿಗೆ ಜಾಗ ಸಿಕ್ಕರೆ ಶಮಿ ಬೆಂಚ್‌ ಕಾಯಬೇಕಾ
ಗಬಹುದು.

ಇಬ್ಬರು ಸ್ಪಿನ್ನರ್‌ಗಳಿಗೆ ಅವಕಾಶ ಕೊಡುವುದಾದರೆ ಯಜುವೇಂದ್ರ ಚಾಹಲ್ ಮತ್ತು ರವೀಂದ್ರ ಜಡೇಜ ಅವರಿಗೆ ಆದ್ಯತೆ ಸಿಗಬಹುದು.

ಆದರೆ ವಿಂಡೀಸ್ ತಂಡದಲ್ಲಿ ಈಗ ಮತ್ತೆ ಗಾಯದ ಸಮಸ್ಯೆ ಕಾಡು ತ್ತಿದೆ. ಪ್ರಮುಖ ಆಟಗಾರ ಎವಿನ್ ಲೂಯಿಸ್ ಶುಕ್ರವಾರವಷ್ಟೇ ವಿಶ್ರಾಂತಿಗೆ ತೆರಳಿದ್ದಾರೆ.

ಕ್ರಿಸ್‌ ಗೇಲ್, ಡ್ವೇನ್ ಬ್ರಾವೊ ಅವರಂತಹ ಪ್ರಮುಖರ ಕೊರತೆ ಕಾಡುತ್ತಿರುವ ತಂಡಕ್ಕೆ ಇದು ನುಂಗಲಾರದ ತುತ್ತಾಗಿದೆ.

ಇದರಿಂದಾಗಿ ಅನುಭವಿಗಳಾದ ನಾಯಕ ಜೇಸನ್ ಹೋಲ್ಡರ್, ಕೀರನ್ ಪೊವೆಲ್ ಮತ್ತು ಉಳಿದ ಯುವ ಆಟಗಾರರೇ ಬಲಿಷ್ಠ ಭಾರತ ತಂಡದ ಸವಾಲನ್ನು ಎದುರಿಸುವ ಒತ್ತಡ ಇದೆ.

**

ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ರಿಷಭ್ ಪಂತ್, ಮಹೇಂದ್ರಸಿಂಗ್ ದೋನಿ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಖಲೀಲ್ ಅಹಮದ್.  ಮುಖ್ಯ ಕೋಚ್ : ರವಿಶಾಸ್ತ್ರಿ

ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಫ್ಯಾಬಿಯಾನ್ ಅಲನ್, ಸುನಿಲ್ ಆ್ಯಂಬ್ರಿಸ್, ದೇವೇಂದ್ರ ಬಿಷೂ, ಚಂದ್ರಪಾಲ್ ಹೇಮರಾಜ್, ಶಿಮ್ರೊನ್ ಹೆಟ್ಮೆಯರ್, ಶಾಯ್ ಹೋಪ್, ಅಲ್ಜರಿ ಜೋಸೆಫ್, ಆ್ಯಷ್ಲೆ ನರ್ಸ್, ಕೀಮೊ ಪಲ್, ರೋಮನ್ ಪೊವೆಲ್, ಕೆಮರ್ ರೋಚ್, ಮಾರ್ಲನ್ ಸ್ಯಾಮುಯೆಲ್ಸ್, ಒಷೇನ್ ಥಾಮಸ್, ಒಬೇನ್ ಮೆಕಾಯ್, ಮರ್ಲಾನ್ ಸ್ಯಾಮುಯೆಲ್ಸ್‌.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !