ನವದೆಹಲಿ: ರಣಜಿ ಕ್ರಿಕೆಟ್ ಟೂರ್ನಿಯರೈಲ್ವೇಸ್ ವಿರುದ್ಧದ ಪಂದ್ಯವನ್ನು 10 ವಿಕೆಟ್ಗಳ ಗೆದ್ದುಕೊಂಡ ಕರ್ನಾಟಕ ತಂಡ 7 ಪಾಯಿಂಟ್ಗಳನ್ನು ಬುಟ್ಟಿಗೆ ಹಾಕಿಕೊಂಡಿತು. ಇದರೊಂದಿಗೆ ಸದ್ಯ ಆಡಿರುವ 6 ಪಂದ್ಯಗಳಿಂದ (ತಲಾ ಮೂರು ಗೆಲವು ಮತ್ತು ಡ್ರಾ) 24 ಅಂಕಗಳಿಸಿಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಇಲ್ಲಿನಕರ್ನೇಲ್ ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದರೈಲ್ವೇಸ್ ಮೊದಲ ಇನಿಂಗ್ಸ್ನಲ್ಲಿ 182 ರನ್ ಗಳಿಸಿ ಆಲೌಟ್ ಆಗಿತ್ತು. ಈ ಮೊತ್ತದೆದುರು ಕರ್ನಾಟಕ 211 ರನ್ ಗಳಿಗೆ ಮುಗ್ಗರಿಸಿ, 29 ರನ್ಗಳ ಅಲ್ಪ ಮುನ್ನಡೆ ಪಡೆಯಿತು.

ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ರೈಲ್ವೇಸ್ ತಂಡವನ್ನು ತ್ರಿವಳಿ ವೇಗಿಗಳಾದ ಅಭಿಮನ್ಯು ಮಿಥುನ್, ಪ್ರತೀಕ್ ಜೈನ್ ಮತ್ತುರೋನಿತ್ ಮೋರೆ ಹಳಿ ತಪ್ಪಿಸಿದರು. ಎಲ್ಲ ವಿಕೆಟ್ಗಳನ್ನೂ ಹಂಚಿಕೊಂಡ ಈ ಮೂವರು ಕೇವಲ 79 ರನ್ ಗಳಿಗೆ ರೈಲ್ವೇಸ್ ಪಡೆಯನ್ನು ನಿಯಂತ್ರಿಸಿದರು. ರೈಲ್ವೇಸ್ನ ಆರಂಭಿಕ ಮೃಣಾಲ್ ದೇವಧರ್ (38) ಹೊರತು ಪಡಿಸಿ ಉಳಿದ ಯಾರೂ ಎರಡಂಕಿ ಮುಟ್ಟಲಿಲ್ಲ.

ಮೊದಲ ಇನಿಂಗ್ಸ್ನಲ್ಲಿ 1 ವಿಕೆಟ್ ಪಡೆದಿದ್ದ ರೋಹಿನ್, ಈ ಬಾರಿ 6 ವಿಕೆಟ್ ಕಿತ್ತರು. ಮಿಥುನ್ (4+3) ಹಾಗೂ ಪ್ರತೀಕ್ (5+1) ಕ್ರಮವಾಗಿಏಳು ಮತ್ತು ಆರು ವಿಕೆಟ್ಕಬಳಿಸಿದರು.

ಹೀಗಾಗಿ ಗೆಲುವಿಗೆ ಕೇವಲ 52 ರನ್ ಗುರಿ ಪಡೆದ ಕರುಣ್ ನಾಯರ್ ಪಡೆ 8.2 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ತಲುಪಿ ಗೆಲುವಿನ ನಗೆ ಬೀರಿತು.

ಮಳೆ ಮತ್ತು ದಟ್ಟ ಮಂಜು ನಾಲ್ಕೂ ದಿನ ಕಾಡಿತು. ಮೊದಲ ದಿನ ಕೇವಲ 49 ಓವರ್ಗಳ ಆಟ ನಡೆದರೆ, ಎರಡನೇ ದಿನ23 ಮತ್ತು 3ನೇ ದಿನ 71.4 ಓವರ್ಗಳ ಆಟವಷ್ಟೇ ಸಾಧ್ಯವಾಯಿತು. ಕೊನೆಯ ದಿನ 38.2 ಓವರ್ಗಳ ಆಟ ನಡೆಯಿತು.

ಮೊದಲ ಇನಿಂಗ್ಸ್
ರೈಲ್ವೇಸ್:77.4 ಓವರ್ಗಳಲ್ಲಿ 182 ರನ್
ಆರಿಂದಮ್ ಘೋಷ್ 59ರನ್
ಅವಿನಾಶ್ ಯಾದವ್ 62 ರನ್
ಪ್ರತೀಕ್ ಜೈನ್ 38ಕ್ಕೆ5 ವಿಕೆಟ್
ಅಭಿಮನ್ಯುಮಿಥುನ್ 51ಕ್ಕೆ 4 ವಿಕೆಟ್
ರೋನಿತ್ ಮೋರೆ 21ಕ್ಕೆ 1 ವಿಕೆಟ್

ಕರ್ನಾಟಕ:71.1 ಓವರ್ಗಳಲ್ಲಿ 211 ರನ್
ದೇವದತ್ತ ಪಡಿಕ್ಕಲ್ 55 ರನ್
ಎಸ್. ಶರತ್ 62 ರನ್
ಕೆ. ಗೌತಮ್ 41ರನ್
ಅಮಿತ್ ಮಿಶ್ರಾ 70ಕ್ಕೆ 5 ವಿಕೆಟ್
ಹಿಮಾಂಶು ಸಾಂಗ್ವಾನ್ 57ಕ್ಕೆ 3ವಿಕೆಟ್

ಎರಡನೇ ಇನಿಂಗ್ಸ್
ರೈಲ್ವೇಸ್: 30ಓವರ್ಗಳಲ್ಲಿ 79ರನ್
ಮೃಣಾಲ್ ದೇವಧರ್ 38 ರನ್
ರೋನಿತ್ ಮೋರೆ 32ಕ್ಕೆ 6ವಿಕೆಟ್
ಅಭಿಮನ್ಯುಮಿಥುನ್ 17ಕ್ಕೆ 3ವಿಕೆಟ್
ಪ್ರತೀಕ್ ಜೈನ್ 28ಕ್ಕೆ 1ವಿಕೆಟ್

ಕರ್ನಾಟಕ:8.2 ಓವರ್ಗಳಲ್ಲಿ 51 ರನ್
ರೋಹನ್ ಕದಂ27 ರನ್
ದೇವದತ್ತ ಪಡಿಕ್ಕಲ್ 24 ರನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.