ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB vs RR: ರಾಜಸ್ಥಾನಕ್ಕೆ 173 ರನ್‌ಗಳ ಗೆಲುವಿನ ಗುರಿ ನೀಡಿದ ಬೆಂಗಳೂರು

Published 22 ಮೇ 2024, 13:37 IST
Last Updated 22 ಮೇ 2024, 13:37 IST
ಅಕ್ಷರ ಗಾತ್ರ

ಅಹಮದಾಬಾದ್: ಐಪಿಎಲ್‌ನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡಕ್ಕೆ 173 ರನ್‌ಗಳ ಗೆಲುವಿನ ಗುರಿ ನೀಡಿದೆ.

ಟಾಸ್‌ ಗೆದ್ದ ಟಾಸ್‌ ಗೆದ್ದ ರಾಜಸ್ಥಾನ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟ್ ಮಾಡಿತು.

ನಿಗದಿತ 20 ಓವರ್‌ಗಳಲ್ಲಿ ಬೆಂಗಳೂರು ತಂಡ 8 ವಿಕೆಟ್‌ ಕಳೆದುಕೊಂಡು 172 ರನ್‌ ಪೇರಿಸಿತು. ಈ ‍ಪಂದ್ಯವನ್ನು ಗೆಲ್ಲಬೇಕಾದರೆ ರಾಜಸ್ಥಾನ ತಂಡ 173 ರನ್‌ ಗಳಿಸಬೇಕಿದೆ.

ಬೆಂಗಳೂರು ಪರ ಪಾಟೀದಾರ್‌ 34, ಕೊಹ್ಲಿ 32, ಮಹಿಪಾಲ್‌ 32 ರನ್‌ ಹೊಡೆದು ಗಮನ ಸೆಳೆದರು. ರಾಜಸ್ಥಾನ ಪರ ಅವೇಶ್‌ ಖಾನ್‌ 3, ಅಶ್ವಿನ್‌ 2 ವಿಕೆಟ್‌ ಪಡೆದರು.

ತಂಡಗಳು...

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಕೊಹ್ಲಿ, ಡುಪ್ಲೆಸಿ, ಪಾಟೀದಾರ್, ಕ್ಯಾಮರಾನ್ ಗ್ರೀನ್‌, ಕಾರ್ತಿಕ್, ಮ್ಯಾಕ್ಸ್‌ವೆಲ್, ಮಹಿಪಾಲ್, ಮೊಹಮ್ಮದ್‌ ಸಿರಾಜ್‌, ಯಶ್‌ ದಯಾಳ್‌, ಸ್ವಪ್ನಿಲ್‌ ಸಿಂಗ್‌, ಲಾಕಿ ಫರ್ಗ್ಯುಸನ್‌

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಟಾಮ್‌ ಕ್ಯಾಡ್‌ಮೊರ್‌, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಶಿಮ್ರೊನ್ ಹೆಟ್ಮೆಯರ್‌, ಧ್ರುವ್ ಜುರೇಲ್, ಯಜುವೇಂದ್ರ ಚಾಹಲ್, ಟ್ರೆಂಟ್‌ ಬೌಲ್ಟ್‌, ಆವೇಶ್ ಖಾನ್, ಸಂದೀಪ್‌ ಶರ್ಮಾ, ರವಿಚಂದ್ರನ್‌ ಅಶ್ವಿನ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT