ಸೋಮವಾರ, ಮೇ 25, 2020
27 °C

‘ಹಫೀಜ್‌, ಶೋಯೆಬ್‌ ವಿದಾಯ ಹೇಳಲಿ’: ಮಾಜಿ ನಾಯಕ ರಮೀಜ್‌ ರಾಜಾ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಕರಾಚಿ: ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ತೆಗೆದುಕೊಳ್ಳು ವಂತೆ ಹಿರಿಯ ಆಟಗಾರರಾದ ಮೊಹಮ್ಮದ್‌ ಹಫೀಜ್‌ ಮತ್ತು ಶೋಯೆಬ್‌ ಮಲಿಕ್‌ ಅವರಿಗೆ ಮಾಜಿ ನಾಯಕ ರಮೀಜ್‌ ರಾಜಾ ಸಲಹೆ ನೀಡಿದ್ದಾರೆ.

‘ಅವರು ಗೌರವಯುತವಾಗಿ ಮತ್ತು ಘನತೆಯಿಂದ ಕ್ರಿಕೆಟ್‌ಗೆ ವಿದಾಯ ಹೇಳಬೇಕು’ ಎಂದು ಈ ಮಾಜಿ ನಾಯಕರಿಗೆ ವೀಕ್ಷಕ ವಿವರ ಣೆಕಾರರೂ ಆಗಿರುವ ರಮೀಜ್‌ ಸೋಮವಾರ ಹಿತನುಡಿ ಹೇಳಿದ್ದಾರೆ.

‘ಕೆಲವು ವರ್ಷಗಳಿಂದ ಇಬ್ಬರೂ ಪಾಕ್‌ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕ್ರಿಕೆಟ್‌ನಿಂದ ವಿದಾಯ ಹೇಳಲು ಇಬ್ಬರಿಗೂ ಇದು ಸಕಾಲ’ ಎಂದಿದ್ದಾರೆ. ಟ್ವೆಂಟಿ–20 ವಿಶ್ವಕಪ್‌ ನಲ್ಲಿ ಆಡುವುದಾಗಿ 39 ವರ್ಷದ ಹಫೀಜ್‌ ಮತ್ತು 38 ವರ್ಷದ ಶೋಯೆಬ್‌ ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು