ಬುಧವಾರ, ಜನವರಿ 22, 2020
16 °C
ರಣಜಿ ಕ್ರಿಕೆಟ್

KAR vs TN | ಇನಿಂಗ್ಸ್ ಕೊನೆಯಲ್ಲಿ ಗೌತಮ್ ಮಿಂಚು; ಕರ್ನಾಟಕ 336ಕ್ಕೆ ಆಲೌಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿಂಡಿಗಲ್: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ತಮಿಳುನಾಡು ಎದುರಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ ತಂಡ 336ಕ್ಕೆ ಆಲೌಟ್‌ ಆಯಿತು. ಮೊದಲ ದಿನದಾಟದ ಅಂತ್ಯಕ್ಕೆ 94 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 259 ರನ್‌ ಗಳಿಸಿದ್ದ ತಂಡಕ್ಕೆ, ಮಿಂಚಿನ ಅರ್ಧಶತಕ ಗಳಿಸಿದ ಕೃಷ್ಣಪ್ಪ ಗೌತಮ್‌ ನೆರವಾದರು.

ಮೊದಲ ದಿನದಾಟದ ಅಂತ್ಯಕ್ಕೆ ಡೇವಿಡ್‌ ಮಥಾಯಿಸ್‌ ಜೊತೆ ಕ್ರೀಸ್‌ ಕಾಯ್ದುಕೊಂಡಿದ್ದ ಆಲ್ರೌಂಡರ್‌ ಶ್ರೇಯಸ್‌ ಗೋಪಾಲ್‌ (35) ಎರಡನೇ ದಿನ ಒಂದೂ ರನ್‌ ಗಳಿಸಿದೆ ಔಟ್‌ ಆದರು. ಆಗ ಕ್ರೀಸ್‌ಗೆ ಬಂದ ಗೌತಮ್‌ ಟಿ–20 ಶೈಲಿಯಲ್ಲಿ ಬ್ಯಾಟ್‌ ಬೀಸಿದರು. ಕೇವಲ 39 ಎಸೆತಗಳಲ್ಲಿ 51 ರನ್‌ ಗಳಿಸಿ ರಂಜಿಸಿದ ಅವರ ಇನಿಂಗ್ಸ್‌ನಲ್ಲಿ ತಲಾ ನಾಲ್ಕು ಬೌಂಡರಿ ಮತ್ತು ಸಿಕ್ಸರ್‌ಗಳಿದ್ದವು.

ಇದನ್ನೂ ಓದಿ: ಪವನ್–ಪಡಿಕ್ಕಲ್ ಅರ್ಧಶತಕ: ಸಾಧಾರಣ ಮೊತ್ತದತ್ತ ಕರ್ನಾಟಕ

ಕೊನೆಯವರೆಗೂ ಆಡಿದ ಗೌತಮ್‌, 110ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿನ್‌ಗೆ ವಿಕೆಟ್‌ ಒಪ್ಪಿಸುವುದರೊಂದಿಗೆ ಕರ್ನಾಟಕ ತಂಡ ಆಲೌಟ್‌ ಆಯಿತು. ತಮಿಳುನಾಡು ಪರ ಆರ್‌.ಅಶ್ವಿನ್‌ ನಾಲ್ಕು ವಿಕೆಟ್‌ ಪಡೆದರೆ, ಮಣಿಮಾರನ್ ಸಿದ್ದಾರ್ಥ್‌ ಹಾಗೂ ಕೃಷ್ಣಮೂರ್ತಿ ವಿಘ್ನೇಶ್ ತಲಾ ಎರಡು ವಿಕೆಟ್‌ ಕಬಳಿಸಿದರು. ಇನ್ನೊಂದು ವಿಕೆಟ್‌ ಬಾಬಾ ಅಪರಾಜಿತ್ ಪಾಲಾಯಿತು.

ಇಲ್ಲಿನ ಎನ್‌.ಪಿ.ಆರ್. ಕಾಲೇಜು ಮೈದಾನದಲ್ಲಿ ಸೋಮವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದ ಕರ್ನಾಟಕ ಬ್ಯಾಟಿಂಗ್‌ ಆರಂಭಿಸಿತು. ಆದರೆ ಉತ್ತಮ ಆರಂಭ ಸಿಗಲಿಲ್ಲ. ಮಯಂಕ್‌ ಅಗರವಾಲ್‌ (43) ಜೊತೆಗೆ ಇನಿಂಗ್ಸ್‌ ಆರಂಭಿಸಿದ ತಾಳ್ಮೆಯ ಬ್ಯಾಟ್ಸ್‌ಮನ್‌ ದೇಗಾ ನಿಶ್ಚಲ್‌, ಕೇವಲ 4 ರನ್‌ ಗಳಿಸಿ ಔಟಾದರು. ಬಳಿಕ ಕ್ರೀಸ್‌ಗೆ ಬಂದ ದೇವದತ್ತ ಪಡಿಕ್ಕಲ್ (78), ಮಯಂಕ್ ಜೊತೆ ಎರಡನೇ ವಿಕೆಟ್‌ಗೆ 67 ರನ್‌ ಸೇರಿಸಿದ್ದರು.

ಐದನೇ ವಿಕೆಟ್‌ಗೆ ಪವನ್‌ ದೇಶಪಾಂಡೆ (65) ಹಾಗೂ ಪಡಿಕ್ಕಲ್‌ ಶತಕದ ಜೊತೆಯಾಟವಾಡಿದ್ದರು. ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು