ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Trophy | ಮಳೆಯ ಆಟ: ರಣಜಿ ಕ್ವಾರ್ಟರ್‌ಫೈನಲ್‌ ವಿಳಂಬ

Last Updated 6 ಜೂನ್ 2022, 5:17 IST
ಅಕ್ಷರ ಗಾತ್ರ

ಬೆಂಗಳೂರು: ಭಾನುವಾರ ತಡರಾತ್ರಿ ಮಳೆ ಸುರಿದ ಕಾರಣ ಆಲೂರಿನ ಕೆಎಸ್‌ಸಿಎ ಮೈದಾನವು ತೇವವಾಗಿದೆ. ಇದರಿಂದಾಗಿ ಸೋಮವಾರ ಬೆಳಿಗ್ಗೆ ಆರಂಭವಾಗಬೇಕಿದ್ದ ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯಗಳು ವಿಳಂಬವಾಗಿವೆ.

ಈ ಕ್ರೀಡಾಂಗಣದಲ್ಲಿರುವ ಮೂರು ಮೈದಾನಗಳಲ್ಲಿ ಕ್ರಮವಾಗಿ ಕರ್ನಾಟಕ–ಉತ್ತರಪ್ರದೇಶ, ಮುಂಬೈ–ಉತ್ತರಾಖಂಡ ಮತ್ತು ಪಂಜಾಬ್–ಮಧ್ಯಪ್ರದೇಶ ನಡುವಣ ಪಂದ್ಯಗಳು ಬೆಳಿಗ್ಗೆ 9.30ಕ್ಕೆ ಆರಂಭವಾಗಬೇಕಿತ್ತು. ಆದರೆ, ಪಿಚ್ ಮತ್ತು ಹೊರಾಂಗಣದಲ್ಲಿ ಹೆಚ್ಚು ತೇವವಿರುವ ಕಾರಣ ಒಂದು ಗಂಟೆ ಮುಂದೂಡಲಾಯಿತು. ಕ್ರೀಡಾಂಗಣದ ಸಿಬ್ಬಂದಿಯು ನೀರು ಹೊರಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಆದರೆ ರಾಜಾನುಕುಂಟೆಯ ಸಮೀಪವಿರುವ ಜಸ್ಟ್ ಕ್ರಿಕೆಟ್‌ ಮೈದಾನದಲ್ಲಿ ಜಾರ್ಖಂಡ್ ಮತ್ತು ಬಂಗಾಳ ನಡುವಣ ಇನ್ನೊಂದು ಕ್ವಾರ್ಟರ್‌ಫೈನಲ್ ಪಂದ್ಯವು ಆರಂಭವಾಗಿದೆ. ಟಾಸ್ ಗೆದ್ದ ಜಾರ್ಖಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಬಂಗಾಳ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೇ 33 ರನ್ ಗಳಿಸಿದೆ. ಅಭಿಷೇಕ್ ಕುಮಾರ್ ರಾಮನ್ (ಬ್ಯಾಟಿಂಗ್ 14) ಮತ್ತು ಅಭಿಮನ್ಯು ಈಶ್ವರನ್ (ಬ್ಯಾಟಿಂಗ್ 19) ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT