ನವದೆಹಲಿ: ಬ್ರಿಜ್‌ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಕುಸ್ತಿಪಟುಗಳು ನ್ಯಾಯಕ್ಕಾಗಿ ಒತ್ತಾಯಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ಜಂತರ್‌ಮಂತರ್‌ನಿಂದ ಅವರನ್ನು ಹೊರ ಹಾಕಿದ್ದು, ಕುಸ್ತಿ ಪಟುಗಳ ಮೇಲೆ ಹಲ್ಲೆ, ಎಳೆದಾಟ, ಪ್ರತಿಭಟನೆಗೆ ಅಡ್ಡಿ ಮುಂತಾದ ಕ್ರಮಗಳಿಗೆ ದೇಶದ ಕ್ರೀಡಾಪಟುಗಳು ಅಸಮಾಧಾನ ತೋರ್ಪಡಿಸುತ್ತಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕ್ರಿಕೆಟಿಗ ರಾಬಿನ್ ಉತ್ತಪ್ಪ, ನಮ್ಮ ಕುಸ್ತಿ ಆಟದ ಹೀರೊಗಳ ವಿಷಯದಲ್ಲಿ ಆಗುತ್ತಿರುವುದನ್ನು ಕಂಡು ಅತ್ಯಂತ ದುಃಖವಾಗುತ್ತಿದೆ. ಶಾಂತಿಯುತ ಮಾರ್ಗದ ಮೂಲಕ ಪರಿಹಾರಕ್ಕೆ ಯತ್ನಿಸಬಹುದಿತ್ತು. ಆದಷ್ಟು ಬೇಗ ಅದು ಆಗಲಿ ಎಂದು ಹೇಳಿದ್ದಾರೆ.