ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಸುದ್ದಿಗೋಷ್ಠಿಯಲ್ಲಿ ಪತ್ರಕರ್ತನನ್ನು ಮಿಮಿಕ್ರಿ ಮಾಡಿದ ರೋಹಿತ್ ಶರ್ಮಾ

Last Updated 24 ಅಕ್ಟೋಬರ್ 2022, 10:59 IST
ಅಕ್ಷರ ಗಾತ್ರ

ಮೆಲ್ಬರ್ನ್‌:ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್‌ 12ರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಭಾರತಕ್ಕೆ 4 ವಿಕೆಟ್ ಅಂತರದ ಗೆಲುವು ತಂದುಕೊಟ್ಟರು.

ಪಂದ್ಯದ ನಂತರ ಪತ್ರಿಕಾಗೋಷ್ಟಿಯಲ್ಲಿ ರೋಹಿತ್ ಶರ್ಮಾ ಅವರು ಪತ್ರಕರ್ತರನ್ನು ಮಿಮಿಕ್ರಿ ಮಾಡಿದ್ದು ಗಮನ ಸೆಳೆದಿದೆ.

ಎದುರಾಳಿ ತಂಡದ ಯೋಜನೆಯನ್ನು ಬಲವನ್ನು ಅಭ್ಯಸಿಸಿದ್ದಿರಾ ಎಂದು ಪತ್ರಕರ್ತರು ಪ್ರಶ್ನೆ ಕೇಳಿದರು, ಇದಕ್ಕೆ ಪತ್ರಕರ್ತರು ಶೈಲಿಯಲ್ಲಿ ನಾನು ನಿಜವಾಗಿಯೂ ಒಳ್ಳೆಯವನಾಗಿದ್ದೇನೆ, ನಾನು ನಿಜವಾಗಿಯೂ ಒಳ್ಳೆಯವನಾಗಿದ್ದೇನೆ ಎಂದು ಮಿಮಿಕ್ರಿಯೆ ಮಾಡುವ ಮೂಲಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

‘ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರ ಆಟ ಭಾರತದ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಇನಿಂಗ್ಸ್‌’ ಎಂದು ನಾಯಕ ರೋಹಿತ್‌ ಶರ್ಮಾ ಬಣ್ಣಿಸಿದ್ದಾರೆ.

‘ಹೌದು. ಇದು ವಿರಾಟ್‌ ಅವರ ಅತ್ಯುತ್ತಮ ಟಿ20 ಇನಿಂಗ್ಸ್‌ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಒತ್ತಡದ ಪರಿಸ್ಥಿತಿಯಲ್ಲಿ ಉತ್ತಮವಾಗಿ ಆಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದ ರೀತಿಯನ್ನು ನೋಡಿದರೆ ಇದು ಭಾರತದ ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಒಂದು’ ಎಂದು ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ರೋಹಿತ್‌ತಿಳಿಸಿದರು.

‘13ನೇ ಓವರ್‌ವರೆಗೂ ಗೆಲುವಿನ ವಿಶ್ವಾಸವಿರಲಿಲ್ಲ. ಪ್ರತಿ ಓವರ್‌ ಕಳೆದಂತೆ ರನ್‌ ರೇಟ್‌ ಹೆಚ್ಚುತ್ತಲೇ ಇತ್ತು. ಅಂತಹ ಪರಿಸ್ಥಿತಿಯಿಂದ ತಂಡವನ್ನು ಜಯದತ್ತ ಕೊಂಡೊಯ್ಯುವುದು ಸುಲಭವಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT