ಮಂಗಳವಾರ, ಮೇ 18, 2021
30 °C

ಡೆಲ್ಲಿ ತಂಡದ ಪ್ರತಿಭಾ ಶೋಧ ಮುಖ್ಯಸ್ಥರಾಗಿ ಸಾಬಾ ಕರೀಂ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ತಂಡದ ಮಾಜಿ ವಿಕೆಟ್‌ ಕೀಪರ್ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ ಸಾಬಾ ಕರೀಂ ಅವರು ಐಪಿಎಲ್ ಫ್ರಾಂಚೈಸ್‌ ಡೆಲ್ಲಿ ಕ್ಯಾಪಿಲಟ್ಸ್ ತಂಡಕ್ಕೆ ಪ್ರತಿಭಾ ಶೋಧದ ಮುಖ್ಯಸ್ಥರಾಗಿ ಭಾನುವಾರ ನೇಮಕಗೊಂಡಿದ್ದಾರೆ.

ಕರೀಂ ಅವರು ಜನವರಿಯವರೆಗೆ ಬಿಸಿಸಿಐನ ಮುಖ್ಯ ವ್ಯವಸ್ಥಾಪಕ (ಕ್ರಿಕೆಟ್ ಕಾರ್ಯಚಟುವಟಿಕೆಗಳು) ಹುದ್ದೆಯಲ್ಲಿದ್ದರು.

‘ಡೆಲ್ಲಿ ತಂಡಕ್ಕೆ ಪ್ರತಿಭಾ ಶೋಧಕನಾಗಿ ನೇಮಕವಾಗಿದ್ದು ಬಹಳ ಖುಷಿಯ ಸಂಗತಿ. ಐಪಿಎಲ್ ಟೂರ್ನಿಯ ಮೂಲಕ ಹಲವು ಪ್ರತಿಭೆಗಳು ಹೊರಹೊಮ್ಮಿವೆ. ವಿಶ್ವದರ್ಜೆಯ ಆಟಗಾರರನ್ನು ಈ ಟೂರ್ನಿ ಹುಟ್ಟುಹಾಕಿದೆ. ಪ್ರತಿಭೆಗಳ ಬೆಳವಣಿಗೆಗೆ ಇನ್ನಷ್ಟು ನೆರವಾಗಲು ಎದುರು ನೋಡುತ್ತಿದ್ದೇನೆ‘ ಎಂದು ಕರೀಂ ಹೇಳಿದ್ದಾರೆ.

ಕೋವಿಡ್‌–19 ಪಿಡುಗಿನ ಸಂಕಷ್ಟದ ಸಂದರ್ಭದಲ್ಲೂ ಕುಟುಂಬದಿಂದ ದೂರ ಇರುವ ಆಟಗಾರರ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಷ್ಟದ ಸನ್ನಿವೇಶದಲ್ಲಿ ತಮ್ಮ ಪ್ರೀತಿಪಾತ್ರರಿಂದ ದೂರ ಇರುವುದು ಸುಲಭದ ಮಾತಲ್ಲ. ಆದರೂ ಆಟಗಾರರು ಟೂರ್ನಿಯಲ್ಲಿ ಬದ್ಧತೆ ತೋರಿ ಮುಂದುವರಿದಿದ್ದಾರೆ. ಅವರು ಮೆಚ್ಚುಗೆಗೆ ಅರ್ಹರು‘ ಎಂದು ಕರೀಂ ನುಡಿದರು.

53 ವರ್ಷದ ಕರೀಂ ಅವರು ಭಾರತ ತಂಡದ ಪರ 34 ಟೆಸ್ಟ್ ಆಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು