ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ರಸ್ತೆ ಬದಿ ಚಹಾ ಸೇವಿಸಿದ ತೆಂಡೂಲ್ಕರ್‌

Last Updated 31 ಅಕ್ಟೋಬರ್ 2022, 19:06 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಗೋವಾ–ಬೆಳಗಾವಿ ಹೆದ್ದಾರಿ ಬದಿಯ ಮಚ್ಛೆ ಪಟ್ಟಣದ ಫೌಜಿ ಟೀ ಸ್ಟಾಲ್‌ನಲ್ಲಿ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಸೋಮವಾರ ಬೆಳಿಗ್ಗೆ ಚಹಾ ಸೇವಿಸಿ, ಮಾಲೀಕನೊಂದಿಗೆ ಕ್ಲಿಕ್ಕಿಸಿಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಾಲೀಕ ವೈಜು ನಿಟ್ಟೂರಕರ್‌ ಎಂದಿನಂತೆ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದರು. ರಾಷ್ಟ್ರೀಯ ಹೆದ್ದಾರಿ ‘4ಎ’ ಪಕ್ಕದ ಟೀಸ್ಟಾಲ್‌ನ ಮುಂದೆ ಎರಡು ವಾಹನಗಳು ಬಂದು ನಿಂತವು. ಅದರಿಂದ ಇಳಿದ ಬಂದ ನಾಲ್ವರು ಅಂಗರಕ್ಷಕರು ‘ಚಹಾ’ ಆರ್ಡರ್‌ ಮಾಡಿದ್ದಾರೆ.

‘ವಾಹನದಲ್ಲಿ ಕುಳಿತುಕೊಂಡೇ ಚಹಾ ಸೇವಿಸಿದ ತೆಂಡೂಲ್ಕರ್‌, ನಂತರ ಸ್ಟಾಲ್‌ನತ್ತ ಬಂದರು. ‘ಚಹಾ ಚೆನ್ನಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನನ್ನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರಲ್ಲದೆ ಆಟೋಗ್ರಾಫ್‌ ನೀಡಿದರು. ಬಳಿಕ, ಗೋವಾದತ್ತ ಪ್ರಯಾಣ ಬೆಳೆಸಿದರು. ಸಚಿನ್‌ ಜೊತೆಗೆ ಅವರ ಕುಟುಂಬ ಸದಸ್ಯರೂ ಇದ್ದರು’ ಎಂದು ವೈಜು ಮಾಧ್ಯಮದವರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT