ಶನಿವಾರ, ಜುಲೈ 24, 2021
25 °C

ಎಂಜಲು ಬಳಕೆಯಿಂದ ಸಮಸ್ಯೆಯಿಲ್ಲ: ದೀಪಕ್ ಚಾಹರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಕೆಯನ್ನು ಐಸಿಸಿಯು ತಾತ್ಕಾಲಿಕವಾಗಿ ನಿಷೇಧಿಸಿರುವುದರಿಂದ ತಮ್ಮ ಬೌಲಿಂಗ್ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಮಧ್ಯಮವೇಗಿ ದೀಪಕ್ ಚಾಹರ್ ಹೇಳಿದ್ದಾರೆ.

ಸೀಮಿತ ಓವರ್‌ಗಳ ಪರಿಣತ ಬೌಲರ್ ಆಗಿರುವ ದೀಪಕ್, ‘ಟಿ20 ಮಾದರಿಯಲ್ಲಿ ಚೆಂಡು ಕೇವಲ ಎರಡು–ಮೂರು ಓವರ್‌ಗಳಲ್ಲಿ ಉತ್ತಮವಾಗಿ ಸ್ವಿಂಗ್ ಆಗುತ್ತದೆ. ಏಕೆಂದರೆ ಆ ಸಂದರ್ಭದಲ್ಲಿ ಪಿಚ್ ಹೊಸದಾಗಿರುತ್ತದೆ. ಆದ್ದರಿಂದ ಬಿಳಿಚೆಂಡನ್ನು ಹೆಚ್ಚು ಹೊಳೆಸುವ ಅಗತ್ಯವಿಲ್ಲ. ಆದ್ದರಿಂದ ಅದಕ್ಕೆ ಎಂಜಲು ಲೇಪನ ಮಾಡುವುದು ಬೇಕಿಲ್ಲ’ ಎಂದಿದ್ದಾರೆ.

ಕೊರೊನಾ ವೈದಸ್ ಸೋಂಕು ತಡೆಯುವ ಉದ್ದೇಶಿಂದ ಕ್ರಿಕೆಟ್ ಚೆಂಡಿಗೆ ಎಂಜಲು ಲೇಪನ ಮಾಡುವುದನ್ನು ಐಸಿಸಿಯು ಮಂಗಳವಾರ ತಾತ್ಕಾಲಿಕವಾಗಿ ನಿಷೇಧಿಸಿದೆ. ಆದರೆ, ಬೆವರನ್ನು ಬಳಸಬಹುದು ಎಂದು ಹೇಳಿದೆ.

ಅನಿಲ್‌ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು  ಈಚೆಗೆ ಎಂಜಲು ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಬೇಕು ಎಂದು ಶಿಫಾರಸು ಮಾಡಿತ್ತು.  ಈ ಬಗ್ಗೆ ಹಲವು ಕ್ರಿಕೆಟ್ ದಿಗ್ಗಜರು ಪರ–ವಿರೋಧ ಹೇಳಿಕಗಳನ್ನು ನೀಡಿದ್ದರು. ಭಾರತದ ಬಹಳಷ್ಟು ಬೌಲರ್‌ಗಳು ಎಂಜಲು ಬಳಕೆಯನ್ನು ನಿಷೇಧಿಸಬಾರದೆಂದು ವಾದಿಸಿದ್ದರು. ಆದರೆ ಐಸಿಸಿಯು ತನ್ನ ನಿರ್ಧಾರವನ್ನು ಬದಲಿಸಲಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು