ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐನ ಕೇಂದ್ರೀಯ ಗುತ್ತಿಗೆಗೆ ಸರ್ಫರಾಜ್, ಧ್ರುವ್ ಜುರೇಲ್

Published 18 ಮಾರ್ಚ್ 2024, 23:30 IST
Last Updated 18 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ನವತಾರೆ ಸರ್ಫರಾಜ್ ಖಾನ್ ಮತ್ತು ಯುವ ವಿಕೆಟ್‌ ಕೀಪರ್ ಧ್ರುವ್ ಜುರೇಲ್ ಅವರನ್ನು ಬಿಸಿಸಿಐನ ಕೇಂದ್ರೀಯ ಗುತ್ತಿಗೆ ಸಿ ಕೆಟಗರಿಗೆ ಸೇರ್ಪಡೆ ಮಾಡಲಾಗಿದೆ. ಇವರಿಬ್ಬರೂ ಹಾಲಿ ಋತುವಿನಲ್ಲಿ ಮೂರು ಟೆಸ್ಟ್‌ಗಳನ್ನು ಆಡುವ ಮಾನದಂಡ ಪೂರೈಸಿದ್ದಾರೆ.

ಸೋಮವಾರ ನಡೆದ ಬಿಸಿಸಿಐನ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ಇವರಿಬ್ಬರ ಹೆಸರು ಸೇರ್ಪಡೆ ಸ್ಥಿರೀಕರಿಸಲಾಯಿತು. ಮುಂಬೈನ ಆಟಗಾರ ಸರ್ಫರಾಜ್, ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಮೂರು ಅರ್ಧ ಶತಕಗಳನ್ನು ಬಾರಿಸಿದ್ದರು. ಇದೇ ಸರಣಿಯ ರಾಂಚಿ ಟೆಸ್ಟ್‌ ಪಂದ್ಯದಲ್ಲಿ ಜುರೆಲ್‌ 90 ಮತ್ತು ಅಜೇಯ 39 ರನ್ ಗಳಿಸಿ ಗೆಲುವಿಗೆ ನೆರವಾಗಿದ್ದರು. ಎರಡನೇ ಟೆಸ್ಟ್‌ ಪಂದ್ಯದಲ್ಲೇ ‘ಪಂದ್ಯದ ಆಟಗಾರ’ ಪುರಸ್ಕಾರ ಪಡೆದಿದ್ದರು.

ರಣಜಿ ಟ್ರೋಫಿ:

ಬಿಸಿಸಿಐ, ಮುಂದಿನ ಸಾಲಿನ ರಣಜಿ ಟ್ರೋಫಿ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಡಿಸೆಂಬರ್, ಜನವರಿ ತಿಂಗಳ ಅವಧಿಯಲ್ಲಿ ಉತ್ತರ ಭಾರತದ ಹಲವೆಡೆ ಮಂಜು ಮುಸುಕುವುದರಿಂದ ಮತ್ತು ಮಬ್ಬಿನಿಂದಾಗಿ ಆಟಕ್ಕೆ ತೊಂದರೆಯಾಗುತ್ತಿರುವ ಕಾರಣ, ಮುಂದಿನ ಸಾಲಿನಿಂದ ಆ ಸಮಯದಲ್ಲಿ ಅಲ್ಲಿ ಪಂದ್ಯಗಳನ್ನು ಆಡಿಸದಿರಲು ಮುಂದಾಗಿದೆ.

2024–25ನೇ ಸಾಲಿಗೆ ವಿವರವಾದ ದೇಶಿಯ ಕ್ರಿಕೆಟ್ ವೇಳಾಪಟ್ಟಿಯನ್ನು ಮುಂದೆ ಪ್ರಕಟಿಸಲಾಗುವುದು.

ಕೆಲ ವರ್ಷಗಳಿಂದ ದೆಹಲಿ, ಚಂಡೀಗಢ, ಕಾನ್ಪುರ, ಧರ್ಮಶಾಲಾ, ಜಮ್ಮು, ಮೀರಠ್ ಮೊದಲಾದ ಕಡೆ ಹವಾಮಾನದ ಕಾರಣದಿಂದ ಪಂದ್ಯಗಳಿಗೆ ಅಡ್ಡಿಯಾಗಿತ್ತು. ಹೀಗಾಗಿ ಕೆಲವು ತಂಡಗಳು ಅಮೂಲ್ಯ ಪಾಯಿಂಟ್ಸ್ ಕಳೆದುಕೊಳ್ಳುತ್ತಿವೆ. ರಣಜಿ ಟ್ರೋಫಿಯಲ್ಲಿ ಆಟಗಾರರ ಪ್ರದರ್ಶನದ ಮೇಲೆ ಐಪಿಎಲ್‌ ಫ್ರಾಂಚೈಸಿಗಳು ಕಣ್ಣಿಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT