ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ | ಏಕದಿನ ಸರಣಿಗೆ ದೇಶದ ಎತ್ತರದ ಆಟಗಾರನನ್ನು ಬರಮಾಡಿಕೊಂಡ ಕಿವೀಸ್

Last Updated 30 ಜನವರಿ 2020, 14:05 IST
ಅಕ್ಷರ ಗಾತ್ರ

ವೆಲಿಂಗ್ಟನ್: ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 3–0 ಅಂತರದಲ್ಲಿ ಕಳೆದುಕೊಂಡಿರುವನ್ಯೂಜಿಲೆಂಡ್‌, ಏಕದಿನ ಸರಣಿಗೆ ವೇಗಿ ಕೈಲ್‌ ಜೆಮೀಸನ್‌,ಸ್ಕಾಟ್ ಕುಗೆಲಿಜಿನ್ ಮತ್ತು ಹ್ಯಾಮಿಷ್‌ ಬೆನೆಟ್ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಕೀವೀಸ್‌ನ ಪ್ರಮುಖ ಬೌಲರ್‌ಗಳು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಬಲಗೈ ಕೈಲ್‌ಗೆ ಅವಕಾಶ ನೀಡಲಾಗಿದೆ.ನ್ಯೂಜಿಲೆಂಡ್‌ ಪರ ಅತ್ಯಂತ ಎತ್ತರದ ಆಟಗಾರ(6 ‘8’) ಎನಿಸಿರುವ ಕೈಲ್‌ ಇದುವರೆಗೆ ಒಂದೂ ಅಂತರರಾಷ್ಟ್ರೀಯ ಪಂದ್ಯ ಆಡಿಲ್ಲ.ಸ್ಕಾಟ್ ಮತ್ತು ಬೆನೆಟ್ 2017ರಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ಪರ ಆಡಿದ್ದರು.ಗಾಯಗೊಂಡಿರುವ ಟ್ರೆಂಟ್ ಬೌಲ್ಟ್‌, ಲೂಕಿ ಫರ್ಗುಸನ್ ಮತ್ತು ಮ್ಯಾಟ್ ಹೆನ್ರಿ ಲಭ್ಯರಿಲ್ಲ.

‘ಕಿಲ್ಲಾ’ ಎಂದೇ ಪ್ರಸಿದ್ಧರಾಗಿರುವ ಜೆಮೀಸನ್‌ ದೇಶಿ ಕ್ರಿಕೆಟ್‌ನಲ್ಲಿ ಅಪಾಯಕಾರಿ ಬೌನ್ಸರ್‌ಗಳ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ್ದಾರೆ. ಭಾರತ ‘ಎ’ ಎದುರಿನ ನ್ಯೂಜಿಲೆಂಡ್ ‘ಎ’ ತಂಡದ ಸರಣಿಯಲ್ಲಿ ಆಡಿದ್ದರು. ಆಕ್ಲೆಂಡ್‌ನಲ್ಲಿ ಜನಿಸಿ ಕ್ಯಾಂಟರ್‌ಬರಿಯಲ್ಲಿ ಬೆಳೆದ 25 ವರ್ಷದ ಈ ಆಟಗಾರ ‘ಟು–ಮೀಟರ್ ಪೀಟರ್‌’ ಎಂಬ ಅಡ್ಡ ಹೆಸರಿನ ನ್ಯೂಜಿಲೆಂಡ್ ಕೋಚ್ ಪೀಟರ್ ಫಲ್ಟನ್ ಅವರಿಗಿಂತಲೂ ಎತ್ತರವಿದ್ದಾರೆ!

ತಂಡ: ಕೇನ್‌ ವಿಲಿಯಮ್ಸನ್ (ನಾಯಕ), ಹ್ಯಾಮಿಷ್ ಬೆನೆಟ್‌, ಟಾಮ್ ಬ್ಲಂಡೆಲ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಾರ್ಟಿನ್ ಗಪ್ಟಿಲ್, ಕೈಲ್ ಜೆಮೀಸನ್, ಸ್ಕಾಟ್ ಕುಗೆಲಿನ್, ಟಾಮ್ ಲಥಾಮ್, ಜಿಮ್ಮಿ ನೀಶಮ್, ಹೆನ್ರಿ ನಿಕೋಲ್ಸ್‌, ಮಿಷೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್.ಡದಲ್ಲಿ ಜೆಮೀಸನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT