ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ನಾಯಕತ್ವ ತೊರೆಯಲು ಶಾಹೀನ್ ಅಫ್ರೀದಿ ಚಿಂತನೆ

Published 30 ಮಾರ್ಚ್ 2024, 15:56 IST
Last Updated 30 ಮಾರ್ಚ್ 2024, 15:56 IST
ಅಕ್ಷರ ಗಾತ್ರ

ಲಾಹೋರ್: ಪಾಕಿಸ್ತಾನ ಕ್ರಿಕೆಟ್‌ಗೆ ಸಂಬಂಧಿಸಿದಂತೆ ತಮ್ಮನ್ನು ಯಾವುದೇ ಚರ್ಚೆಗೆ ಕರೆಯದ ಕಾರಣ ನಿರಾಶರಾಗಿರುವ ‌‌ಟಿ20 ತಂಡದ ನಾಯಕ ಶಾಹೀನ್ ಶಾ ಅಫ್ರೀದಿ ಇದೀಗ ಆ ಸ್ಥಾನದಿಂದ ಕೆಳಗಿಳಿಯಲು ಚಿಂತನೆ ನಡೆಸುತ್ತಿದ್ದಾರೆ.

ಪಿಸಿಬಿ ಅಧ್ಯಕ್ಷ ಮೊಹಸಿನ್ ನಕ್ವಿ ಆಗಲಿ, ರಾಷ್ಟ್ರೀಯ ಆಯ್ಕೆಗಾರರಾಲಿ, ತಮ್ಮ ಜೊತೆ ಭವಿಷ್ಯದ ಯೋಜನೆ, ನಾಯಕತ್ವ ಅಥವಾ ಕೋಚ್‌ಗಳ ಆಯ್ಕೆಗೆ ಸಂಬಂಧಿಸಿ ಒಮ್ಮೆಯೂ  ಮಾತನಾಡದೇ ಇರುವುದರಿಂದ ಶಾಹೀನ್ ಬೇಸರಗೊಂಡಿದ್ದಾರೆ ಎಂದು ಅವರಿಗೆ ಆಪ್ತವಾದ ಮೂಲಗಳು ತಿಳಿಸಿವೆ.

ಟಿ20 ವಿಶ್ವಕಪ್‌, ಕೋಚ್‌ಗಳ ನೇಮಕ, ನಾಯಕತ್ವಕ್ಕೆ ಸಂಬಂಧಿಸಿ ಪಿಸಿಬಿ ಮುಖ್ಯಸ್ಥರು, ತಮ್ಮನ್ನು ಕತ್ತಲಲ್ಲಿಟ್ಟು, ಮಾಜಿ ನಾಯಕ ಬಾಬರ್ ಆಜಂ ಜೊತೆ ಮಾತುಕತೆ ನಡೆಸಿದ್ದರಿಂದ ಶಹೀನ್ ಬೇಸರಗೊಂಡಿದ್ದಾರೆ ಎಂದು ಈ ಮೂಲ ತಿಳಿಸಿದೆ.

‘ನನ್ನನ್ನು ನಾಯಕತ್ವದಿಂದ ತೆಗೆದುಹಾಕುವುದಿದ್ದರೆ ಮಂಡಳಿ ಇಷ್ಟು ಹೊತ್ತಿಗೆ ನನಗೇ ಈ ಬಗ್ಗೆ ತಿಳಿಸಬೇಕಿತ್ತು. ನಾನಾಗಿಯೇ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೆ. ಮಂಡಳಿ ಸೃಷ್ಟಿಸಿರುವ ಈ ಎಲ್ಲ ಗೊಂದಲಗಳಿಂದ ಹೊರಬರಲು ಹುದ್ದೆ ತ್ಯಜಿಸುವಂತೆ ನನ್ನ ಆಪ್ತರೇ ಸಲಹೆ ನೀಡುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT