ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಮೊಣಕಾಲಿಗೆ ಆಗಿರುವ ಗಾಯದಿಂದಾಗಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಹಾಗೂ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ತಂಡದ ಬೌಲಿಂಗ್ ವಿಭಾಗ ಸೊರಗಿದೆ.
‘ಶಾಹೀನ್‌ಗೆ ಗಾಯದಿಂದ ಚೇತರಿಸಿಕೊಳ್ಳಲು ಆರು ವಾರಗಳ ವಿಶ್ರಾಂತಿ ಬೇಕಿದೆಯೆಂದು ವೈದ್ಯರ ತಂಡವು ತಿಳಿಸಿದೆ. ಆದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಗಿದೆ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.