ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ ಪ್ರಶಸ್ತಿಗೆ ಶಮಿ, ಖೇಲ್ ರತ್ನಕ್ಕೆ ಸಾತ್ವಿಕ್–ಚಿರಾಗ್ ಜೋಡಿ ನಾಮನಿರ್ದೇಶನ

ಪ್ರತಿಷ್ಠಿತ ಕ್ರೀಡಾಪ್ರಶಸ್ರಿಗಳಿಗಾಗಿ ನಾಮನಿರ್ದೇಶನ
Published 13 ಡಿಸೆಂಬರ್ 2023, 20:13 IST
Last Updated 13 ಡಿಸೆಂಬರ್ 2023, 20:13 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ಅವರಿಗೆ ಅರ್ಜುನ  ಹಾಗೂ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ ಅವರಿಗೆ ಮೇಜರ್ ಧ್ಯಾನಚಂದ್ ಖೇಲ್‌ ರತ್ನ ಪ್ರಶಸ್ತಿ ನೀಡಲು ನಾಮನಿರ್ದೇಶನ ಮಾಡಲಾಗಿದೆ.

ಈಚೆಗೆ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶಮಿ ಅಮೋಘ ಬೌಲಿಂಗ್ ಮಾಡಿದ್ದರು. ಒಟ್ಟು 24 ವಿಕೆಟ್ ಗಳಿಸಿದ್ದರು.

ಅವರ ಆಟದಿಂದಾಗಿ ಭಾರತವು ಫೈನಲ್ ಪ್ರವೇಶಿಸಿತ್ತು.  ಅವರಿಗೆ ಅರ್ಜುನ ಪ್ರಶಸ್ತಿ ನೀಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಹಾಕಿ ಆಟಗಾರರಾದ ಕೃಷ್ಣನ್ ಬಹಾದ್ದೂರ್ ಪಾಠಕ್, ಸುಶೀಲಾ ಚಾನು, ಆರ್ಚರಿಪಟು ಓಜಸ್ ಪ್ರವೀಣ್ ದೇವತಾಳೆ, ಅದಿತಿ ಗೋಪಿಚಂದ್ ಸ್ವಾಮಿ, ಬಾಕ್ಸರ್ ಮೊಹಮ್ಮದ್ ಹುಸಾಮುದ್ದೀನ್, ಚೆಸ್ ಆಟಗಾರ್ತಿ ಆರ್. ವೈಶಾಲಿ, ಗಾಲ್ಫ್ ಆಟಗಾರ್ತಿ ದೀಕ್ಷಾ ದಾಗರ್, ಶೂಟರ್ ಐಶ್ವರ್ಯಾ ಪ್ರತಾಪ್ ಸಿಂಗ್ ಥೋಮರ್, ಕುಸ್ತಿಪಟು ಅಂತಿಮ ಪಂಘಾಲ್, ವುಷು ಪಟು ಎನ್. ರೋಶಿಬಿನಾ ದೇವಿ ಮತ್ತು ಟಿಟಿ ಆಟಗಾರ್ತಿ ಐಹಿಕಾ ಮುಖರ್ಜಿ ಅವರ ಹೆಸರುಗಳೂ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ.

ದ್ರೋಣಾಚಾರ್ಯ ಪುರಸ್ಕಾರಕ್ಕಾಗಿ ಗಣೇಶ್ ಪ್ರಭಾಕರನ್ (ಮಲ್ಲಕಂಬ), ಮಹಾವೀರ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್), ಲಲಿತ್ ಕುಮಾರ್ (ಕುಸ್ತಿ), ಆರ್. ರಮೇಶ್ (ಚೆಸ್) ಮತ್ತು ಶಿವೇಂದ್ರ ಸಿಂಗ್ (ಹಾಕಿ) ಅವರನ್ನು ಶಿಫಾರಸು ಮಾಡಲಾಗಿದೆ.

ಧ್ಯಾನಚಂದ್ ಜೀವಮಾನ ಸಾಧನೆ ಪುರಸ್ಕಾರಕ್ಕಾಗಿ ಕವಿತಾ (ಕಬಡ್ಡಿ), ಮಂಜೂಶಾ ಕನ್ವರ್ (ಬ್ಯಾಡ್ಮಿಂಟನ್) ಹಾಗೂ ವಿನೀತ್ ಕುಮಾರ್ ಶರ್ಮಾ (ಹಾಕಿ ) ಅವರ ಹೆಸರುಗಳು ನಾಮನಿರ್ದೇಶನಗೊಂಡಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT