ಸೋಮವಾರ, ನವೆಂಬರ್ 29, 2021
20 °C

ಮಿಥಾಲಿ ರಾಜ್ ಶ್ರೇಷ್ಠ ಬ್ಯಾಟರ್: ಶಾಂತಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ಟ್ರೈಕ್‌ರೇಟ್‌ ಏನೇ ಇರಲಿ, ಮಿಥಾಲಿ ರಾಜ್ ಅವರು ಭಾರತ ಮಹಿಳಾ ಕ್ರಿಕೆಟ್‌ ತಂಡದ ಶ್ರೇಷ್ಠ ಬ್ಯಾಟರ್ ಎಂದು ಮಾಜಿ ನಾಯಕಿ ಹಾಗೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಪೆಕ್ಸ್ ಸಮಿತಿ ಸದಸ್ಯೆ ಶಾಂತಾ ರಂಗಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. 

ಆಸ್ಟ್ರೇಲಿಯಾ ಮಹಿಳಾ ತಂಡದ ಎದುರು ನಡೆದ ಏಕದಿನ ಸರಣಿಯಲ್ಲಿ ಭಾರತ ತಂಡ ಅತ್ಯುತ್ತಮ ಆಟವಾಡಿದೆ ಎಂದು ಹೇಳಿರುವ ಅವರು ಚಾಂಪಿಯನ್ ತಂಡದ ವಿರುದ್ಧ ಪ್ರಬಲ ಪೈಪೋಟಿ ನೀಡಿ 1–2ರಲ್ಲಿ ಸರಣಿ ಸೋತಿದೆ ಎಂದಿದ್ದಾರೆ. ಭಾನುವಾರ ನಡೆದ ಮೂರನೇ ಪಂದ್ಯದಲ್ಲಿ ಜಯಿಸುವ ಮೂಲಕ ಭಾರತ ತಂಡ ಆಸ್ಟ್ರೇಲಿಯಾದ ದಾಖಲೆ ಜಯದ ಓಟಕ್ಕೆ ಬ್ರೇಕ್ ಹಾಕಿತ್ತು. ಆಸ್ಟ್ರೇಲಿಯಾ ಸತತ 26 ಪಂದ್ಯಗಳನ್ನು ಗೆದ್ದುಕೊಂಡಿತ್ತು.

‘ಮಿಥಾಲಿ ಅವರು ಭಾರತ ಕಂಡ ಅತ್ಯುತ್ತಮ ಬ್ಯಾಟರ್. ಈಗಲೂ ಅವರು ಶ್ರೇಷ್ಠ ಆಟಗಾರ್ತಿಯಾಗಿಯೇ ಉಳಿದಿದ್ದಾರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎದುರಿನ ಸರಣಿಗಳಲ್ಲಿ ಅವರು ಚೆನ್ನಾಗಿ ಆಡಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಆಡಲು ಅವರಿಗೆ ಗೊತ್ತು. ಒಂದು ತುದಿಯಲ್ಲಿ ವಿಕೆಟ್‌ಗಳು ಪತನವಾಗುತ್ತಿದ್ದರೆ ಮತ್ತೊಂದು ತುದಿಯಲ್ಲಿರುವವರ ಸ್ಟ್ರೈಕ್ ರೇಟ್‌ ನಗಣ್ಯ’ ಎಂದು ಶಾಂತಾ ಹೇಳಿದ್ದಾರೆ. 

‘ಭಾರತ ತಂಡ ಫೀಲ್ಡಿಂಗ್‌ನಲ್ಲಿ ಸುಧಾರಣೆ ಕಾಣಬೇಕಾಗಿದೆ. ಆಟಗಾರ್ತಿಯರು ಲಯ ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಹರ್ಮನ್‌ಪ್ರೀತ್ ‍ಪದೇ ಪದೇ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ವಿದೇಶದಲ್ಲಿ ಲೀಗ್ ಪಂದ್ಯಗಳನ್ನು ಆಡುವ ಬದಲು ಭಾರತಕ್ಕಾಗಿ ಮಾತ್ರ ಆಡಲು ಅವರು ಗಮನಹರಿಸಬೇಕು’ ಎಂದು ಶಾಂತಾ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು