ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾರ ಬದಲಿಗೆ ಪೃಥ್ವಿ ಶಾರನ್ನು ಆಡಿಸುವುದು ಸೂಕ್ತ: ಬ್ರಾಡ್ ಹಾಗ್

Last Updated 3 ಜುಲೈ 2021, 10:49 IST
ಅಕ್ಷರ ಗಾತ್ರ

ಸಿಡ್ನಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಚೆತೇಶ್ವರಪೂಜಾರ ಬದಲಿಗೆ ಬೇರೆ ಆಟಗಾರನನ್ನು ಕಣಕ್ಕಿಳಿಸಲು ಟೀಮ್ ಇಂಡಿಯಾ ಬಯಸಿದರೆ ಪೃಥ್ವಿ ಶಾ ಸೂಕ್ತ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯಲ್ಲಿಪೂಜಾರ ಬದಲಿಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಉತ್ತಮ ಆಯ್ಕೆಯಾಗಬಲ್ಲರೇ? ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ಉತ್ತರಿಸಿದ 50 ವರ್ಷದ ಎಡಗೈ ಸ್ಪಿನ್ನರ್, ತಂಡದಲ್ಲಿ ಇನ್ನಿಂಗ್ಸ್ ಆರಂಭಿಸುವ ಪೃಥ್ವಿ ಶಾ, ಮೂರನೇ ಸ್ಥಾನಕ್ಕೆ ಉತ್ತಮ ಆಯ್ಕೆ ಎಂದು ಹೇಳಿದರು.

‘ಭಾರತ ತಂಡದಲ್ಲಿ ಪೂಜಾರರನ್ನು ಬದಲಿಸಲು ಬಯಸಿದರೆ ಅದಕ್ಕೆ ಪೃಥ್ವಿ ಶಾ ಉತ್ತಮ ಆಯ್ಕೆ ಆಗಿರುತ್ತಾರೆ. ಸಾಕಷ್ಟು ಪ್ರತಿಭೆ ಮತ್ತು ದೀರ್ಘ ಭವಿಷ್ಯವನ್ನು ಹೊಂದಿರುವ ಅವರು ಇನಿಂಗ್ಸ್ ತೆರೆಯುವುದಕ್ಕಿಂತ ಮೂರನೇ ಸ್ಥಾನಕ್ಕೆ ಸೂಕ್ತ ಎಂದು ಹಾಗ್ ಹೇಳಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ತಂಡದಲ್ಲಿ ಪೃಥ್ವಿ ಶಾ ಇಲ್ಲ. ಆದರೆ, ಅವರು ವೈಲ್ಡ್ ಕಾರ್ಡ್ ಆಯ್ಕೆಯಾಗಿದ್ದಾರೆ ಎಂದು ಬ್ರಾಡ್ ಹಾಗ್ ಟ್ವೀಟ್ ಮಾಡಿದ್ದಾರೆ.

ಐದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶಾ, ಜುಲೈ 13 ರಿಂದ ಶ್ರೀಲಂಕಾ ವಿರುದ್ಧ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಗೆ ಆಯ್ಕೆಯಾಗಿರುವ ಶಿಖರ್ ಧವನ್ ನೇತೃತ್ವದ ಭಾರತ ತಂಡದಲ್ಲಿದ್ದಾರೆ.

ಕಳೆದ ತಿಂಗಳು ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಎಂಟು ವಿಕೆಟ್‌ಗಳ ಸೋಲು ಕಂಡ ನಂತರ, ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ತಂಡದಲ್ಲಿ ಬದಲಾವಣೆಯ ಸುಳಿವು ನೀಡಿದ್ದರು. ಯಾವುದೇ ಹೆಸರುಗಳನ್ನು ತೆಗೆದುಕೊಳ್ಳದೆ ಕೊಹ್ಲಿ ಸಾಕಷ್ಟು ರನ್ ಗಳಿಸದ ಕೆಲ ಆಟಗಾರರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT