ಮಂಗಳವಾರ, ನವೆಂಬರ್ 24, 2020
27 °C
ಟ್ರೆಂಟ್‌ ಬೌಲ್ಟ್‌ ಬಿರುಗಾಳಿ;

ಡೆಲ್ಲಿಗೆ ಶ್ರೇಯಸ್, ರಿಷಭ್ ಆಸರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ನಾಯಕನಿಗೆ ತಕ್ಕ ಆಟವಾಡಿದ ಶ್ರೇಯಸ್ ಅಯ್ಯರ್ ಮತ್ತು ಒತ್ತಡದಲ್ಲಿಯೂ ಉತ್ತಮವಾಗಿ ಆಡಿದ ರಿಷಭ್ ಪಂತ್ ಮಂಗಳವಾರ ಇಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಸರೆಯಾದರು.

ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡದ ಎಡಗೈ ವೇಗಿ ಟ್ರೆಂಟ್ ಬೌಲ್ಟ್ (30ಕ್ಕೆ3) ಅವರ ಪ್ರತಾಪಕ್ಕೆ ಡೆಲ್ಲಿ ತಂಡವುಆರಂಭದಲ್ಲಿಯೇ ಕುಸಿದಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ (ಔಟಾಗದೆ 65; 50ಎ, 6ಬೌಂ, 2ಸಿ) ಮತ್ತು ರಿಷಭ್ ಪಂತ್ (56; 38ಎ, 4ಬೌಂ, 2ಸಿ)  ಅರ್ಧಶತಕಗಳ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 156 ರನ್ ಗಳಿಸಿತು.

 ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಬಳಗಕ್ಕೆ ಮೊದಲ ಎಸೆತದಲ್ಲಿ ಟ್ರೆಂಟ್ ಬೌಲ್ಟ್‌ ಆಘಾತ ನೀಡಿದರು. ಆಫ್‌ಸ್ಟಂಪ್‌ನಿಂದಾಚೆ ಪುಟಿದೆದ್ದ ಚೆಂಡನ್ನು ತಡವಲು ಹೋದ ಮಾರ್ಕಸ್ ಸ್ಟೋಯಿನಿಸ್ ವಿಕೆಟ್‌ಕೀಪರ್ ಕ್ವಿಂಟನ್‌ ಡಿ ಕಾಕ್‌ಗೆ ಸುಲಭದ ಕ್ಯಾಚ್ ಆದರು.

ತಮ್ಮ ಎರಡನೇ ಓವರ್‌ನಲ್ಲಿ ಅಜಿಂಕ್ಯ ರಹಾನೆ ವಿಕೆಟ್ ಕಬಳಿಸುವಲ್ಲಿ ಟ್ರೆಂಟ್ ಯಶಸ್ವಿಯಾದರು. ನಾಲ್ಕನೇ ಓವರ್‌ ಬೌಲಿಂಗ್ ಮಾಡಿದ ಸ್ಪಿನ್ನರ್ ಜಯಂತ್ ಯಾದವ್ ಎಸೆತದ ತಿರುವನ್ನು ಅರಿಯುವ ಮುನ್ನವೇ ಶಿಖರ್ ಕ್ಲೀನ್ ಬೌಲ್ಡ್ ಆದರು. ಮುಂಬೈ ನಾಯಕ ರೋಹಿತ್ ಶರ್ಮಾ ತಂತ್ರ ಫಲಿಸಿತು.

ಇದರಿಂದಾಗಿ 22 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ಡೆಲ್ಲಿ ತಂಡ ಆತಂಕದಲ್ಲಿತ್ತು. ಈ ಹಂತದಲ್ಲಿ ಜೊತೆಗೂಡಿದ ಮುಂಬೈಕರ್ ಶ್ರೇಯಸ್ ಮತ್ತು ಎಡಗೈ ಬ್ಯಾಟ್ಸ್‌ಮನ್ ರಿಷಭ್ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ96 ರನ್ ಸೇರಿಸಿದರು. 

ಆರನೇ ಓವರ್‌ನಲ್ಲಿ ತಮಗೆ ಸಿಕ್ಕ ಜೀವದಾನವನ್ನು ಶ್ರೇಯಸ್ ಸಮರ್ಥವಾಗಿ ಬಳಸಿಕೊಂಡರು.

 15ನೇ ಓವರ್‌ನಲ್ಲಿ ರಿಷಭ್ ಪಂತ್ ವಿಕೆಟ್ ಕಬಳಿಸಿದ ನೇಥನ್ ಕೌಲ್ಟರ್‌ನೈಲ್ ಮೇಲುಗೈ ಸಾಧಿಸಿದರು. ಶಿಮ್ರೊನ್ ಹೆಟ್ಮೆಯರ್  ಆಟಕ್ಕೆ ಬೌಲ್ಟ್ ತಡೆಯೊಡ್ಡಿದರು. ಕಗಿಸೊ ರಬಾಡ ರನ್‌ಔಟ್  ಆದರು. ಆದರೆ ಇನ್ನೊಂದು ಬದಿಯಲ್ಲಿ ಸಿಕ್ಕ ಅವಕಾಶಗಳಲ್ಲಿಯೇ ಶ್ರೇಯಸ್ ಬ್ಯಾಟ್ ಬೀಸಿದರು.

ಆದರೆ, ಕೊನೆಯ ಐದು ಓವರ್‌ಗಳಲ್ಲಿ ಡೆಲ್ಲಿ ಖಾತೆ ಸೇರಿದ್ದ ಕೇವಲ 38 ರನ್‌ಗಳು. ಅದರಲ್ಲಿ ಮೂರು ವಿಕೆಟ್‌ಗಳು ಪತನವಾದವು.

ರೋಹಿತ್ ದ್ವಿಸತಕ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಐಪಿಎಲ್‌ನಲ್ಲಿ 200ನೇ ಪಂದ್ಯವಾಡಿದರು. 

ಮಹೇಂದ್ರಸಿಂಗ್ ಧೋನಿಯ ನಂತರ ದ್ವಿಶತಕದ ಗಡಿ ದಾಟಿದ ಬ್ಯಾಟ್ಸ್‌ಮನ್ ಆದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು